ಅತಂತ್ರ ಭಾಷಿಕ ನೆಲೆಯಲ್ಲಿ ರೂಪಿತವಾದ ಕನ್ನಡದ ಅಸ್ಮಿತೆ
ಡಾ.ಪ್ರಕಾಶ ಗ.ಖಾಡೆ
ಕನ್ನಡ ನವೋದಯ ಕಾವ್ಯದ ಆರಂಭದ ಕಾಲದಲ್ಲಿ ಕನ್ನಡ ನಾಡಿನ ಸಾಂಸ್ಕøತಿಕ ಸ್ಥಿತಿ ಪ್ರದೇಶದಿಂದ ಪ್ರದೇಶಕ್ಕೆ ಬಿsನ್ನವಾಗಿತ್ತು. ಒಂದೆಡೆ ಪೆÇ್ರೀತ್ಸಾಹ ಮತ್ತು ಉತ್ತೇಜನದಿಂದ ಕನ್ನಡ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದ್ದಿದೆ. ಇನ್ನೊಂದೆಡೆ ಅನ್ಯ ಭಾಷೆಗಳ ಹೇರಿಕೆಯಿಂದ ದುಸ್ಥಿತಿಗೆ ಒಳಗಾಗಿತ್ತು. ಎಲ್ಲಿ ಪೆÇ್ರೀತ್ಸಾಹ, ಉತ್ತೇಜನ ದೊರೆತು ಕನ್ನಡ ಮನ್ನಣೆಗೆ ಪಾತ್ರವಾಗಿತ್ತೊ ಅಲ್ಲಿ ರೂಪಿತವಾದ ಕಾವ್ಯ ಶಿಷ್ಟತೆಗೆ ಒಳಗು ಮಾಡಿಕೊಂಡಿತು. ಆದರೆ ಅನ್ಯ ಭಾಷೆಗಳ ಒತ್ತಡಕ್ಕೊಳಗಾದ ಪ್ರದೇಶದಲ್ಲಿ ನಮ್ಮ ಜನಪದರು ಹುಟ್ಟುಹಾಕಿದ ಗ್ರಾಮ್ಯ, ದೇಸಿ ಕಾವ್ಯ ಪ್ರಕಾರಗಳು, ಕನ್ನಡ ಕಾವ್ಯವನ್ನು ಜನಪರಗೊಳಿಸಿದವು. ಈ ಕಾರಣವಾಗಿ ಕನ್ನಡದ ನವೋದಯಕ್ಕೆ ಜಾನಪದ ಸತ್ವ ಮೈದುಂಬಿಕೊಂಡು ನವೋದಯ ಕಾವ್ಯದ ಹುಟ್ಟಿಗೆ ಮೊದಲಾಯಿತು.
ಕನ್ನಡ ನವೋದಯ ಪೂರ್ವ ಮೈಸೂರು ಕರ್ನಾಟಕದಲ್ಲಿದ್ದ ಸ್ಥಿತಿಗೂ ಉತ್ತರ ಕರ್ನಾಟಕದಲ್ಲಿದ್ದ ಪರಿಸ್ಥಿತಿಗೂ ಗಮನಾರ್ಹ ವ್ಯತ್ಯಾಸಗಳಿದ್ದವು. ಮೈಸೂರು ಅರಮನೆ ಸಾಹಿತ್ಯ, ಕಲೆ, ಸಂಗೀತ ಕ್ಷೇತ್ರಕ್ಕೆ ನೀಡಿದ ಪೆÇ್ರೀತ್ಸಾಹ ಅಪಾರ. ಕೃಷಿ, ಕೈಗಾರಿಕೆ, ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾದಿsಸಿ ಭಾರತದಲ್ಲಿ ಮೊದಲ ಮಾದರಿ ರಾಜ್ಯವಾಗಿ ಹೆಸರುಗಳಿಸಿತ್ತು. ಯಕ್ಷಗಾನ, ನಾಟಕ ಕ್ಷೇತ್ರಕ್ಕೆ ಮೈಸೂರು ಅರಮನೆ ಮಹತ್ವದ ಸೇವೆ ಸಲ್ಲಿಸಿದರೆ, ಅರಮನೆಯ ಸಾಹಿತ್ಯ ಪೆÇೀಷಣೆಯಲ್ಲಿ ಬಸವಪ್ಪಶಾಸ್ತ್ರಿ, ಎಂ.ಎಲ್.ಶ್ರೀಕಂಠೇಗೌಡರು, ಸೋಸಲೆ ಅಯ್ಯಶಾಸ್ತ್ರಿ ಮುಂತಾದವರು ಸಂಸ್ಕøತದಿಂದ, ಇಂಗ್ಲಿಷಿನಿಂದ ನಾಟಕಗಳನ್ನು ಅನುವಾದ ಮಾಡುವ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಬೆಳೆಯ ಫಸಲು ನೀಡಿದರು. ಒಂದು ರೀತಿಯಿಂದ ಕನ್ನಡಕ್ಕೆ ಪೆÇ್ರೀತ್ಸಾಹವಿದ್ದ ಮೈಸೂರು ಭಾಗದಲ್ಲಿ ಬರೆದ ಕವಿಗಳು ಸಂಪ್ರದಾಯಕ್ಕೆ ಬದ್ಧರಾಗಬೇಕಾಯಿತು.
ವಸ್ತುಶಃ ಬ್ರಿಟಿಷರ ಅದಿsೀನದಲ್ಲಿದ್ದ ಮೈಸೂರು ಅರಸರ ಅರಮನೆಯ ಶಿಷ್ಟಾಚಾರವನ್ನು ಈ ಭಾಗದ ಬರಹಗಾರರ ಕನ್ನಡವು ಅವಶ್ಯಕವಾಗಿ ಪರಿಪಾಲಿಸಲೇಬೇಕಾಗಿತ್ತು. ಈ ಪರಿಸ್ಥಿತಿಯಲ್ಲಿ ಇಲ್ಲಿ ಕಾವ್ಯ ವಸ್ತು ಮತ್ತು ಭಾಷೆಗಳೆರಡೂ ಒಂದು ಸಂಪ್ರದಾಯಕ್ಕೆ ಅನಿವಾರ್ಯವಾಗಿ ಬದ್ಧವಾಗಬೇಕಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ಒಂದು ಬಗೆಯ ಸಾಂಸ್ಕøತಿಕವಾದ ದೇಶೀ ಚೇತನ ಅನ್ಯ ಭಾಷಿಕ ತಳಮಳದಲ್ಲಿ ಕುಡಿವೊಡೆದು ಬೆಳೆಯತೊಡಗಿದ್ದು ಕನ್ನಡದ ಹೆಚ್ಚುಗಾರಿಕೆಯಾಗಿದೆ. ಇಲ್ಲಿನ ಭಾಷಿಕ ಸಾಂಸ್ಕøತಿಕ ತಳಮಳ ಕನ್ನಡವನ್ನು ಮೇಲೆತ್ತಲು ಮಾಡಿದ ಪ್ರಯತ್ನಗಳನ್ನು ಮರುಪರಿಶೀಲಿಸಬೇಕಾಗಿದೆ.
ಈ ಪರಿಶೀಲನೆಯಲ್ಲಿ ಕನ್ನಡ ದೇಸಿ ಕಾವ್ಯದ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಜಾನಪದದ ಸತ್ವ ಮತ್ತು ಸಮಗ್ರತೆಯನ್ನು ಅರಿಯಲು ಸಾಧ್ಯವಾಗುತ್ತದೆ. ಚರಿತ್ರೆಯ ಹಿಂದಿನ ಆಶಯಗಳು ಆ ಕಾಲದ ಕಾವ್ಯದ ರಚನಾ ಸಂದರ್ಭಗಳನ್ನು ಪ್ರಕಟಪಡಿಸುತ್ತವೆ. ಕರ್ನಾಟಕದ ಉತ್ತರದ ಭಾಗ ನವೋದಯ ಪೂರ್ವದಲ್ಲಿ ಉರ್ದು ಮತ್ತು ಮರಾಠಿ ಭಾಷಿಕ ಪ್ರಾಬಲ್ಯದಿಂದ ಕನ್ನಡ ನೆಲಕಚ್ಚಿದ ನುಡಿಯಾಗಿತ್ತು. ಹೀಗಾಗಿ ಇಲ್ಲಿ ಮೊದಮೊದಲು ಕನ್ನಡ ಉಳಿವಿಗಾಗಿಯೇ ಹೋರಾಟ ನಡೆಯಬೇಕಾಯಿತು. ಮರಾಠಿಯ ಪ್ರಾಬಲ್ಯವನ್ನು ಹೋಗಲಾಡಿಸಿ ಕನ್ನಡಕ್ಕೆ ನೆಲೆಸಿಗುವಂತೆ ಮಾಡಿದುದು ಈ ಕಾಲದ ಮುಖ್ಯ ಸಾಧನೆ.
ಕರ್ನಾಟಕದ ಉತ್ತರ ಭಾಗ ವಿಜಯನಗರ ಪತನದ ನಂತರ ಮೊದಲು ಆದಿಲ್ಶಾಹಿಯವರ ಆದಿsಪತ್ಯದಲ್ಲೂ, ನಂತರ ಹೈದರಾಲಿ, ಟಿಪ್ಪು ಸುಲ್ತಾನರ ಕೈಯಲ್ಲೂ, ತದನಂತರ ಮರಾಠರ
ಆಡಳಿತದಲ್ಲೂ ಘಾಸಿಗೊಂಡಿತು. 1820ರಲ್ಲಿನ ವಸಾಯಿ ಒಪ್ಪಂದದ ನಂತರ ಬ್ರಿಟಿಷರು ಈ ಭಾಗದ ಆಡಳಿತವನ್ನು ಮರಾಠರಿಂದ ತಮ್ಮ ಕೈಯಲ್ಲಿ ತೆಗೆದುಕೊಂಡರು. ಹೀಗಾಗಿ ಬ್ರಿಟಿಷ್ ಆಡಳಿತಗಾರರ ಆಗಿನ ಭ್ರಮೆ ಈ ಭಾಗ ‘ದಕ್ಷಿಣ ಮಹಾರಾಷ್ಟ್ರ’ (ಸದರ್ನ ಮರಾಠಾ ಕಂಟ್ರಿ)ವೆಂಬುದು. ಅದಕ್ಕಾಗಿ ಅವರಿಂದ ಸ್ಥಾಪಿತವಾದ ಇಲ್ಲಿಯ ರೇಲ್ವೆಯ ಹೆಸರು ‘ಮದ್ರಾಸ ಎಂಡ ಸದರ್ನ ಮರಾಠಾ ರೇಲ್ವೆ’ ಇತ್ಯಾದಿ ಸ್ವತಃ
ಕನ್ನಡಿಗರೆ ತಮ್ಮ ಉಜ್ವಲ ಪರಂಪರೆಯನ್ನು ಮರೆತು ಹೆತ್ತ ತಾಯಿಯನ್ನು ಕಡೆಗಣಿಸಿ ಮರಾಠಿಯೇ ತಮ್ಮ ಭಾಷೆಯೆಂದು ತಬ್ಬಿಕೊಂಡ ಕಾಲ ಅದು. ಪ್ರಭುಶಂಕರ ಅವರು ಈ ಕಾಲದ ಕನ್ನಡ ಭಾಷಿಕ ಸ್ಥಿತಿಯನ್ನು ಹಾಗೂ ಸಾಂದಬಿರ್sಕತೆಯನ್ನು ಹೀಗೆ ಕಟ್ಟಿಕೊಡುತ್ತಾರೆ:
‘‘ಹತ್ತೊಂಬತ್ತನೆಯ ಶತಮಾನದ ಕನ್ನಡ ನಾಡು ಕಾವೇರಿಯಿಂದ ಗೋದಾವರಿಗೆ ಹರಡಿದ್ದರಾಗಿರಲಿಲ್ಲ. ಒಂದು ಭಾಷೆಯನ್ನು ಮಾತನಾಡುವ ಜನ ಏಕಚಕ್ರಾದಿsಪತ್ಯದಲ್ಲಿದ್ದ ಅದನ್ನು ಆಳುವವನು ಅಥವಾ ಆಳುವವರು ಜನರ ಭಾಷೆಯನ್ನು ಮಾತನಾಡುವವರಾಗಿದ್ದು, ಆ ಭಾಷೆಯ ವಿಷಯದಲ್ಲಿ ಮಮತೆ ಗೌರವಗಳನ್ನು ಉಳ್ಳವರಾಗಿದ್ದರೆ ಆ ಭಾಷೆ ಮೆಟ್ಟಿಲು ಮೆಟ್ಟಲಾಗಿ ಉನ್ನತ ಸ್ಥಿತಿಯನ್ನು ತಲುಪುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಂಗ್ಲಿಷ್, ಫ್ರೆಂಚ್, ಜರ್ಮನ್ ಮುಂತಾದವು ಅಂತಹ ಸೌಭಾಗ್ಯವನ್ನು ಪಡೆದಿರುವ ಭಾಷೆಗಳು. ನಾವು ಈಗ ವಿವೇಚಿಸುತ್ತಿರುವ ಅವದಿsಯಲ್ಲಿ (1900-1925) ಕನ್ನಡಕ್ಕೆ ಆ ಭಾಗ್ಯ ಇರಲಿಲ್ಲ. ಉತ್ತರ ಕರ್ನಾಟಕದ ಒಂದು ಭಾಗ ಹೈದರಾಬಾದು ನಿಜಾಮನ ಆಡಳಿತಕ್ಕೆ ಸೇರಿದ್ದು ಆ ಭಾಗದ ಕನ್ನಡ ಅಲ್ಲಿನ ಆಳರಸರ ಭಾಷೆಯಾದ ಉರ್ದುವಿನೊಂದಿಗೆ ಸೆಣಸಬೇಕಾಗಿತ್ತು. ಅಲ್ಲಿಂದ ಮತ್ತೊಂದು ಭಾಗ ಮದರಾಸು ಅದಿsಪತ್ಯಕ್ಕೆ ಸೇರಿದ್ದರೂ, ಭೌಗೋಳಿಕ ಸಾಮಿಪ್ಯದಿಂದ ತೆಲುಗಿನ ಪ್ರಾಬಲ್ಯವನ್ನು ಸಹಿಸಬೇಕಾಯಿತು. ಮತ್ತೊಂದು ಭಾಗ ಮಹಾರಾಷ್ಟ್ರಕ್ಕೆ ಸೇರಿದ್ದು ಮರಾಠೀ ಜನರ ಆಕ್ರಮಣಕಾರೀ ಸ್ವಭಾವದಿಂದಾಗಿ ಅಲ್ಲಿ ಕನ್ನಡವು ಕೇವಲ ತನ್ನ ಅಸ್ತಿತ್ವಕ್ಕಾಗಿಯೇ ಹೋರಾಡಬೇಕಾದ ಸ್ಥಿತಿಯಿತ್ತು. ನಿಜವಾಗಿ ‘ದಕ್ಷಿಣ ಮಹಾರಾಷ್ಟ್ರ’ ಎಂದು ಕರೆಸಿಕೊಳ್ಳುತ್ತಿದ್ದ
ಧಾರವಾಡ, ವಿಜಾಪುರ, ಬೆಳಗಾವಿ ಜಿಲ್ಲೆಗಳ ಆ ಭಾಗದಲ್ಲಿ ಕನ್ನಡವು ಹೋರಾಡಲೂ ಸಾಧ್ಯವಿಲ್ಲದಂತಹ ನಿತ್ರಾಣ ಸ್ಥಿತಿಯಲ್ಲಿತ್ತು
ಬೆಳಗಾವಿಯಲ್ಲಿ 1921 ರಲ್ಲಿ ಪ್ರತಿದಿನ ಒಂದಿಲ್ಲೊಂದು ಸಭೆ ಸೇರಿಯೇ ಸೇರುತ್ತಿದ್ದಿತು. ಪ್ರತಿಯೊಂದು ಸಭೆಯ ಪ್ರಾರಂಭದಲ್ಲಿ ಹೇಳುವ ಪದ್ಯ ಕವಿತೆಗಳು ಮರಾಠೀ ಭಾಷೆಯವು. ಇಷ್ಟೇ ಅಲ್ಲ ಮಹಾರಾಷ್ಟ್ರದ ಅಬಿsಮಾನವನ್ನೂ ಹುಟ್ಟಿಸುವಂತಹವು. ಅವು ಬೇಡವೆಂದು ಹೇಳುವ ಗಂಡೆದೆ ಯಾರಲ್ಲಿಯೂ ಇರಲಿಲ್ಲ.ಕನ್ನಡದ ಪ್ರದೇಶವಾಗಿದ್ದ ಈ ಭಾಗದಲ್ಲಿ ಮರಾಠಿ ಭಾಷೆಯ ಹಾಡು-ಭಾಷಣಗಳು ಉಂಟುಮಾಡುತ್ತಿದ್ದ ಕನ್ನಡದ ಪರಕೀಯತೆಗೆ ಆನಂದಕಂದರು ರೂಪಿಸಿದ ತಂತ್ರವನ್ನು ಎಂದರೆ ತಾವು ಶಿಕ್ಷಕರಾಗಿದ್ದ ರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೇರೆ ಬೇರೆ ರಾಷ್ಟ್ರೀಯ ಪದ್ಯಗಳನ್ನು ಕಲಿಸಿ ಅಂದಿನ ಸಭೆಗಳಲ್ಲಿ ಅಧ್ಯಕ್ಷರಿಗೆ ಹೇಳಿ ಕನ್ನಡ ಹಾಡು ಹೇಳಿಸಲು ಪ್ರಾರಂಬಿsಸಿದರು. ಬೆಳಗಾವಿ ಕರ್ನಾಟಕದ್ದೆಂದು ರಾಷ್ಟ್ರೀಯ
ಮಹಾಸಭೆ ಒಪ್ಪಿದ್ದರೂ, ಕರ್ನಾಟಕ ಕಾಂಗ್ರೆಸ್ ಸಮಿತಿಯವರಿಂದಲೇ ಸಾಗಿದ ಬೆಳಗಾವಿಯ ರಾಷ್ಟ್ರೀಯ ಶಾಲೆಯಲ್ಲಿ ಮರಾಠಿ ವಿದ್ಯಾರ್ಥಿಗಳು ಮಹಾರಾಷ್ಟ್ರಕ್ಕೆ ಸಂಬಂದಿsಸಿದ ಗೀತಗಳನ್ನೇ ಹಾಡುತ್ತಿದ್ದರು. ಆ ಹುಡುಗರು ಹಾಡುವುದನ್ನು ಕೇಳುತ್ತ ಕನ್ನಡ ವಿದ್ಯಾರ್ಥಿಗಳು ಕಳೆಗೆಟ್ಟು
ನಿಲ್ಲುವುದನ್ನು ಕಂಡ ಬೆಟಗೇರಿ ಕೃಷ್ಣಶರ್ಮರು
‘ನಾನಿದನೇ ಹಾಡುವೆನು ಹಾಡು
ನನ್ನದು ಈ ಕನ್ನಡ ನಾಡು’
ಎಂಬ ಕನ್ನಡ ನಾಡಿನ ಹಾಡನ್ನು ರಚಿಸಿ ತಮ್ಮ ವಿದ್ಯಾರ್ಥಿಗಳಿಗೆ ಕಲಿಸಿದರು. ಕನ್ನಡ ವಿದ್ಯಾರ್ಥಿಗಳು ಈ ಹಾಡನ್ನು ಹಾಡತೊಡಗಿದರೆಂದರೆ ಮರಾಠೀ ವಿದ್ಯಾರ್ಥಿಗಳು ಬೆರಗಾಗಿ ನೋಡುತ್ತಿದ್ದರು. ಮರಾಠೀ ಹುಡುಗರು
‘‘ಭಾಷಾ ಅಮುಚೀbsÁನ್ ಮರಾಠೀ
ಭಾಷಾ ಅಮುಚೀbsÁನ್’’
ಎಂದು ಅಬಿsಮಾನದಿಂದ ಹಾಡತೊಡಗಿದಾಗ, ಕನ್ನಡ ವಿದ್ಯಾರ್ಥಿಗಳು ತಮ್ಮ ಭಾಷೆಯ ಮೇಲ್ಮೆಯ ವಿಚಾರವಾಗಿ ಒಂದು ಗೀತೆಯನ್ನು ಅಪೇಕ್ಷಿಸಿದಾಗ ಆನಂದಕಂದರು
‘‘ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು’’
ಎಂಬ ಗೀತೆಯನ್ನು ರಚಿಸಿಕೊಟ್ಟು ವಿದ್ಯಾರ್ಥಿಗಳಲ್ಲಿ ಕನ್ನಡದ ಉತ್ಸಾಹ ಮೂಡಿಸುವುದರೊಂದಿಗೆ ‘ರಕ್ಷಿಸು ಕರ್ನಾಟಕ ದೇವಿ’ ಎಂಬ ಗೀತೆಯನ್ನು ಶಾಲೆಯ ನಿತ್ಯದ ಪ್ರಾರ್ಥನೆಯಲ್ಲಿ ಸೇರಿಸಿ ಕನ್ನಡದ ಅಸ್ತಿತ್ವವನ್ನು ಸಾರಿದ್ದು ಒಂದು ಸಾಧನೆಯೇ ಆಗಿದೆ.
ಆ ಕಾಲದ ಕನ್ನಡಕ್ಕಿದ್ದ ಸ್ಥಿತಿಯನ್ನು ಹಿರಿಯರು ಕಂಡಿರಿಸಿದ್ದು ಹೀಗೆ....‘ಕನ್ನಡ ಕೇಂದ್ರ ಸ್ಥಾನವಾಗಿದ್ದ ಧಾರವಾಡ ಜಿಲ್ಲೆಯಲ್ಲಿ ಬರಿಯ ಮರಾಠಿ ಶಾಲೆಗಳು. ಕನ್ನಡ ಕಲಿಸುವ ಶಾಲೆಗಳಿರಲಿಲ್ಲ( ಎಂ.ಸಿ.ಕಟ್ಟಿ ),
‘ಕರ್ನಾಟಕದ ಉತ್ತರ ಸೀಮೆಯಲ್ಲಿನ ಕರ್ನಾಟಕ ಭಾಷೆಯು ಲುಪ್ತವಾಗುತ್ತ ನಡೆಯಿತು’ (ಬಿ.ಜಿ.ಹುಲಿಕವಿ ) ‘ಕರ್ನಾಟಕದ ಗರ್ಭದಂತಿರುವ ಧಾರವಾಡದಲ್ಲಿಯೂ ಕನ್ನಡ ಶಾಲೆಗಳಲ್ಲಿ ಮರಾಠಿಯನ್ನು ಬಾಲಬೋಧಲಿಪಿಯನ್ನು ಕಲಿಸಬೇಕೆಂದು ಸರಕಾರದ ಧೋರಣವಾಗಿ ಕುಳಿತಿತ್ತು’ (ನಾ.ವೆ.ಕುರಡಿ)
ಎಲ್ಲಿ ನೋಡಲು ಮರಾಠಿಯರ ನಾಟಕ ಕೀರ್ತಿ
ಯೆಲ್ಲಿ ನೋಡಲು ಮರಾಠಿಯರ ನಾಟಕದರ್ಥಿ
ಯೆಲ್ಲಿ ನೋಡಲು ಮರಾಠಿಯರ ನಾಟಕ ನಟರ
ಮೂರ್ತಿಗಳ ಸಂಚಾರವು |
ಎಲ್ಲಿ ನೋಡಲು ಮರಾಠಿಯರ ನಾಟಕದಾಟ
ವೆಲ್ಲಿ ನೋಡಲು ಮರಾಠಿಯರ ನಾಟಕದೂಟ
ವೆಲ್ಲಿ ನೋಡಲು ಮರಾಠಿಯರ ನಾಟಕಮಯಂ ತಾನಾಯ್ತು ಕರ್ನಾಟಕಂ |
- ಶಾಂತಕವಿಗಳು
ಹೀಗೆ ನೆಲಕಚ್ಚಿ ಹೋಗಿದ್ದ ಕನ್ನಡವನ್ನು ಮೇಲೆತ್ತಲು ಪಣತೊಟ್ಟ ಕನ್ನಡ ಕವಿಗಳ ಒಂದು ಪಡೆಯೇ ಇಲ್ಲಿ ನಿರ್ಮಾಣವಾಯಿತು. ಶಾಂತಕವಿಗಳು, ಕಾವ್ಯಾನಂದ ನರಸಿಂಹಾಚಾರ್ಯ ಪುಣೆಕರ, ಶ್ರೀಧರ ಖಾನೋಳಕರ, ಆನಂದಕಂದ ಮುಂತಾದವರು ಮುಂಬೆಳಕಿನ ಕಾಲದಲ್ಲಿ ಹಳೆಯ ರೀತಿಯಲ್ಲಿಯೆ ಹೊಸತನವನ್ನು ತರಲು ಪ್ರಯತ್ನಿಸಿದರು. ಕನ್ನಡಕ್ಕೆ ಒಂದು ನೆಲೆ ಸಿಕ್ಕ ನಂತರ ಅದನ್ನು ಭದ್ರಪಡಿಸುವ ಕೆಲಸವನ್ನು ಮುದವೀಡು ಕೃಷ್ಣರಾಯರು, ಆಲೂರು ವೆಂಕಟರಾಯರು ಮುಂತಾದವರು ತಮ್ಮ ಪ್ರಚಾರ ಕಾರ್ಯದಿಂದ ಸಾದಿsಸಿದರು.
ಕನ್ನಡದ ಏಳಿಗೆಗೆ ಅವಶ್ಯವೆನಿಸುವ ಎಲ್ಲ ರೀತಿಯಿಂದ ಪ್ರಯತ್ನ ಮಾಡುವ ಸ್ತುತ್ಯ ಉದ್ದೇಶದಿಂದ ರಾಮಚಂದ್ರ ಹನಮಂತ ದೇಶಪಾಂಡೆ, ವೆಂಕಟರಂಗೋ ಕಟ್ಟಿ, ಶಾಮರಾವ ವಿಠಲ, ಧೋಂಡೋ ನರಸಿಂಹ ಮುಳಬಾಗಿಲ ಮುಂತಾದ ಕನ್ನಡ ಕಟ್ಟಾಬಿsಮಾನಿಗಳು ಧಾರವಾಡದಲ್ಲಿ 1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು. ಮರಾಠಿ ಮೋಹದೊಳಗೆ ಸಿಲುಕಿಕೊಂಡ ಕನ್ನಡಿಗರ ಕಣ್ಣು ತೆರೆಯಿಸಿ ಮರಮರನೆ ಮರಗುತ್ತಿರುವ ಕರ್ನಾಟಕ ಜನನಿಯ ಕಣ್ಣೊರೆಸುವಲ್ಲಿ ಭುಜಂಗರಾವ ಹುಯಿಲಗೋಳ, ಅಣ್ಣಾರಾವ ಸವದಿ, ಶೇಷಗಿರಿರಾವ ಗಂಗಾಧರ
ಮಡಿವಾಳೇಶ್ವರ ತುರಮರಿ ಮುಂತಾದವರು ಮುಂದಾದರು. ಸಂದರ್ಭವನ್ನು ನಾ.ವೆ.ಕುರಡಿ ಆತ್ಮನಿವೇದನೆ (ವಾಗ್ಭೂಪಣ 1924)ಯಲ್ಲಿ ವಿವರಿಸುತ್ತಾರೆ.
ಕನ್ನಡ ನಾಡು ನುಡಿ ಹಾಗೂ ಅದರ ಉಜ್ವಲ ಇತಿಹಾಸದ ಬಗೆಗೆ ಶಾಂತಕವಿಗಳಿಗಿದ್ದ ಉತ್ಕಟಾಬಿsಮಾನ ಅನುಪಮವಾದುದು, ಅಸಾಧಾರಣವಾದುದು. ಕನ್ನಡ ಅವರ ಬದುಕಿನ ಉಸಿರಾಯಿತು. ಬಾಳಿನ ದಿವ್ಯ ಮಂತ್ರವಾಯಿತು. ‘ಕನ್ನಡ ನಾಡಿನ ಕನ್ನಡ ಮಾತಿನ ಕನ್ನಡ ಮಾನಿಸರೈ ನಾವು’ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಅವರ ಈ ಹೆಮ್ಮೆ ಕೇವಲ ಮಾತಿನದಾಗಿರಲಿಲ್ಲ. ಕನ್ನಡವನ್ನು ಕಟ್ಟಲು ಅವರು ಸ್ವತಃ ಮುಂದಾದರು. ಜೊತೆಗೆ ವೈಚಾರಿಕ ನೆಲೆಯಲ್ಲಿ ಈ ಚಿಂತನೆಗೆ ಇಂಬು ಕೊಟ್ಟರು.
‘ಭಾಷೆಯನ್ನು ಊರ್ಜಿತ ಸ್ಥಿತಿಗೆ ತರಬೇಕಾದರೆ ಅನೇಕ ವಿಷಯಗಳ ವಿಷಯವಾಗಿ ಮೊದಲು ಪುಷ್ಕಳ ಗ್ರಂಥಗಳಾಗಬೇಕು. ಗ್ರಂಥಗಳು ಪುಷ್ಕಳ ಆಗಬೇಕಾದರೆ ಮೊದಲು ವಾಚಕರು ಬೇಕು. ವಾಚಕರು ಬಹುಜನರಾಗಬೇಕಾದರೆ ಮೊದಲು ಜನರಿಗೆ ಭಾಷೆಯ ಸವಿಯು ಹತ್ತಬೇಕು. ಭಾಷೆಯ ಸವಿಯು ಜನರಿಗೆ ಹತ್ತಬೇಕಾದರೆ ಅವರ ಮನವನ್ನು ಆನಂದಪಡಿಸತಕ್ಕ ಮನೋರಂಜಕ ಗ್ರಂಥಗಳ ಸವಿಯು ಜನರಿಗೆ ಹತ್ತುತ್ತ ನಡೆದಂತೆ ಜೋತಿಷ್ಯ, ವೈದ್ಯಕೀಯ, ರಸಾಯನ, ಭಾರ್ಗವ, ಯಂತ್ರ, ಕಲಾಕೌಶಲ್ಯ, ಕೃಷಿಕರ್ಮ ಮುಂತಾದ ಶಾಸ್ತ್ರಗಳನ್ನು ರಚಿಸುತ್ತ ಹೋಗಿ ಅವುಗಳನ್ನು ಓದುವ ಅಬಿsರುಚಿಯನ್ನು ಜನರಲ್ಲಿ ನೆಲೆಗೊಳಿಸಬೇಕು ಅಂದರೆ ಭಾಷೆಯನ್ನು ಊರ್ಜಿತ ಸ್ಥಿತಿಗೆ ತರಲಿಕ್ಕೆ ಯೋಗ್ಯ ಪ್ರಯತ್ನ ಮಾಡಿದಂತಾಗುವುದು’ ಹೀಗೆ ಶಾಂತಕವಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡ ತಲೆ ಎತ್ತುವಂತೆ ಮಾಡಲು ಮಾಡಬೇಕಾದ ಕರ್ತವ್ಯಗಳನ್ನು ಜನತೆಯಲ್ಲಿ ಜಾಗೃತಗೊಳಿಸಿದರು.
**
ವಿಳಾಸ : ಡಾ.ಪ್ರಕಾಶ ಗ.ಖಾಡೆ. ಮನೆ ನಂ. ಎಸ್. 135, ಸೆಕ್ಟರ್ ನಂ. 63, ನವನಗರ,ಬಾಗಲಕೋಟೆ -587103
ಮೊ. 9845500890
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ