ಸೋಮವಾರ, ಆಗಸ್ಟ್ 18, 2025

ಬಾಗಲಕೋಟೆ ಜಿಲ್ಲೆಯ ಸಾಹಿತ್ಯ, ಜಾನಪದ ಮತ್ತು ಸಂಶೋಧನಾ ಕ್ಷೇತ್ರದ ಒಳನೋಟ


                                          ಬಾಗಲಕೋಟೆ ಜಿಲ್ಲೆಯ ಸಾಹಿತ್ಯ,

ಜಾನಪದ ಮತ್ತು ಸಂಶೋಧನಾ ಕ್ಷೇತ್ರದ ಒಳನೋಟ


 

                                                                                 ಡಾ. ಪ್ರಕಾಶ .ಖಾಡೆ  

ಬಾಗಲಕೋಟ ಜಿಲ್ಲೆಯು ರಚನೆಯಾಗಿ 2022 ಅಗಸ್ಟ್ 15 ರಂದು ಇಪ್ಪತ್ತೈದು ವರುಷಗಳು ತುಂಬಿದವು. ಕನ್ನಡ, ಕರ್ನಾಟಕ ವಿಷಯದಲ್ಲಿ ಜಿಲ್ಲೆಯು ಅತ್ಯಂತ ಆದರಣೀಯ ಸ್ಥಾನ ಪಡೆದಿದೆ. ಕವಿರಾಜ ಮಾರ್ಗ ಕೃತಿಕಾರನ ಕಾಲದಿಂದಲೂ ಭಾಗ ಅಪ್ಪಟ ಕನ್ನಡ ಪ್ರದೇಶವಾಗಿತ್ತು. ನೃಪತುಂಗ ಕವಿಯು ಹತ್ತನೆಯ ಶತಮಾನದ ಪೂರ್ವದಲ್ಲಿಯೇ  ಭಾಗದ ಅಂದಿನಕಿಸೂವಳಲ್ಎಂದು ಕರೆಯಿಸಿಕೊಂಡಪಟ್ಟದಕಲ್ಲುಪ್ರದೇಶವನ್ನು ಶುದ್ಧ ಕನ್ನಡವನ್ನಾಡುವ ಪ್ರದೇಶವನ್ನಾಗಿ ಉಲ್ಲೇಖಿಸಿರುವುದು ಬಾಗಲಕೋಟ ಜಿಲ್ಲೆ ಕನ್ನಡ ಚರಿತ್ರೆ ಅತ್ಯಂತ ಶ್ರೀಮಂತವಾದುದು ಎಂದು ಸಾರುತ್ತದೆ. ಜೊತೆಗೆ ಕನ್ನಡ ರಾಜ್ಯಾಡಳಿತವನ್ನು ನಡೆಸಿದ ಬಾದಾಮಿ ಚಾಲುಕ್ಯರು ಏಳನೆಯ ಶತಮಾನದಲ್ಲಿಯೇ ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಜಗದಗಲ ಹಬ್ಬಿಸಿದ್ದರು. ಜನಪದ ಹಾಡುಗಾರರು ತಮ್ಮ ಬೀಸುಕಲ್ಲಿನ ಪದಗಳು, ಸೋಬಾನೆ ಪದಗಳು, ಗೀಗೀ, ಲಾವಣಿ, ಹಂತಿ ಮೊದಲಾದ ಪದಗಳ ಮೂಲಕ, ಹಾಗೇನೆ ವಚನಕಾರರು, ಶರಣರು, ಕೀರ್ತನಕಾರರು, ಸೂಫೀ ಸಂತರು ತಮ್ಮ ರಚನೆಗಳ ಮೂಲಕ ಕನ್ನಡ ನಾಡವರ ನಾಲಗೆಯ ಮೇಲೆ ಕನ್ನಡ ನುಡಿ ನಲಿನಲಿದಾಡುವಂತೆ ಮಾಡಿದರು. ಚಾಲುಕ್ಯರ ಕಾಲದ ರವಿಕೀರ್ತಿ, ವಿಜಯ ಭಟ್ಟಾರಿಕೆ, ಅಚಲನ್, ವೈಜನಾಥ ಮೊದಲಾದ ಶಾಸನ ಕವಿಗಳು ಸಂಸ್ಕø ರಾಜಭಾಷೆಯಾಗಿದ್ದ ಕಾಲದಲ್ಲಿ ಕನ್ನಡ ಭಾಷೆಯನ್ನು ಬಳಸಿ ಬೆಳಸಿದರು.

         ಮಹಾಕವಿ ರನ್ನನಂತೂ ವಾಗ್ದೇವಿಯ ಶಬ್ಧ ಭಂಡಾರ ಒಡೆದು ಕನ್ನಡ ಕಟ್ಟಿದ ಶಕ್ತಿ ಕವಿ. ವಶಾಹತುಶಾಹಿ ಕಾಲದ ಆಂಗ್ಲಭಾಷಾ ಹೇರಿಕೆಗೂ ಜಿಲ್ಲೆಯ ಕನ್ನಡ ಜಗ್ಗಲಿಲ್ಲ. ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿತು. ಜಿಲ್ಲೆಯ ಪ್ರದೇಶಗಳು ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಮರಾಠಿ ಮತ್ತು ಉರ್ದು ಭಾಷಿಕರ ಆಡಳಿತಕ್ಕೆ ಒಳಪಟ್ಟಾಗಲೂ ಕನ್ನಡ ಭಾಷೆ ಮುಕ್ಕಾಗದಂತೆ ಉಳಿದುಕೊಂಡು ಬಂದಿತು. ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲೆಯ ಮುಂದಾಳುಗಳು ತೋರಿದ ದೂರದೃಷ್ಟಿ ಕಾರಣವಾಗಿ ಜಿಲ್ಲೆಯಲ್ಲಿ ಕನ್ನಡ ನಳನಳಿಸುವಂತಾಯಿತು. ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕಾಯಕದಲ್ಲಿ ಕವಿ. ಸಾಹಿತಿ, ಚಿಂತಕರು ಮುಂಚೂಣಿಯಲ್ಲಿ ನಿಂತು ಆಡಳಿತ ಭಾಷೆಯಾಗಿ ಕನ್ನಡ ಜಾರಿಗೆ ಬರಲು ಕೈಕೊಂಡ ಕಾರ್ಯಗಳು ಸ್ಮರಣೀಯವಾಗಿವೆ. ಬಾಗಲಕೋಟೆಯ ಕೆರೂರು ವಾಸುದೇವಾಚಾರ್ಯರು ತಮ್ಮ ಕೃತಿಗಳ ಮೂಲಕ ಕನ್ನಡಕ್ಕೆ ಹೊಸತನ ತಂದರು. 1892 ರಲ್ಲಿಚಂದ್ರಿಕಾಕನ್ನಡ ಪತ್ರಿಕೆಯನ್ನು ಬಾಗಲಕೋಟೆಯಿಂದ ಆರಂಭಿಸುವ ಮೂಲಕ ಕೆರೂರು ರಾಘವಭಟ್ಟರು ಕನ್ನಡ ಪತ್ರಿಕೊದ್ಯಮಕ್ಕೆ ಹೊಸದಿಕ್ಕು ತೋರಿದರು.  1917 ರಲ್ಲಿ ತಮ್ಮ ಶುಭೋದಯ ಪತ್ರಿಕೆಯಲ್ಲಿ ಕರ್ನಾಟಕ ಏಕೀಕರಣ ವಿಷಯವನ್ನು ತಮ್ಮ ಹರಿತವಾದ ಲೇಖನಿಯಿಂದ ಪ್ರಕಟಿಸಿ ಕಾಲಕ್ಕೆ ಜನಸಾಮಾನ್ಯರಲ್ಲಿ ಮಾತೃಭಾಷೆಯ ಅರಿವು ಮೂಡಿಸಿದರು. 1923-39 ಅವಧಿಯಲ್ಲಿದ್ವೇತ ದುಂಧುಬಿಮಾಸ ಪತ್ರಿಕೆಯನ್ನು ರಾಮಾಚಾರ್ಯ ಕಟಗೇರಿ ಅವರು ನಡೆಸಿ ಕನ್ನಡ ನುಡಿ ದೇಗುಲಕ್ಕೆ ಕಳಸವನ್ನೀಟ್ಟರು. 1925-30 ಅವಧಿಯಲ್ಲಿ ಮಂಗಳವೇಡೆ ಶ್ರೀನಿವಾಸರಾಯರುಕನ್ನಡ ನನ್ನ ಜೀವನಹಾಗೂಕನ್ನಡಿಗರಾಷ್ಟ್ರೀಯ ಪತ್ರಿಕೆಗಳನ್ನು ಬಾಗಲಕೋಟೆಯಿಂದ ತರುವ ಮೂಲಕ ಬಾಗಿಲುಕೋಟೆಗೆ ಕನ್ನಡ ತೋರಣ ಕಟ್ಟಿದರು. .ರಾ.ಪುರೋಹಿತ, ಬುರ್ಲಿ ಬಿಂದು ಮಾಧವರು, ಶ್ರೀನಿವಾಶಾಚಾರ್ಯರು, ರಂ.ಶ್ರೀ.ಮುಗಳಿ, ರಾ..ಧಾರವಾಡಕರ, ಜೋರಾಪುರ ಗುರುರಾಯರು, ಭೀಮರಾವ ಪರ್ವತಿ, ಬೀಳೂರು ಗುರುಬಸವರು ಮೊದಲಾದವರು ಬಾಗಲಕೋಟೆ ಪರಿಸರದಲ್ಲಿದ್ದುಕೊಂಡು ಕನ್ನಡ ಕಟ್ಟಿದರು. ಚಿಕ್ಕೋಡಿ ತಮ್ಮಣ್ಣಪ್ಪ, ವೈರಾಗ್ಯದ ಮಲ್ಲಣಾರ್ಯರು, ಜಂಗೀನ ಮುರಗಯ್ಯನವರು, ಟೀಕೀನ ಮಠದ ರೇವಣಸಿದ್ದ ಶ್ರೀಗಳು, ಹುನಗುಂದದ ಮಠ ಮಾಸ್ತರರು, ಸಿ..ನಂದೀಮಠರು, ಕೌಜಲಗಿ ಹನಮಂತರಾಯರು, ರಾಮ ಜಾಧವ ಮೊದಲಾದವರು ಕರ್ನಾಟಕ ಏಕೀಕರಣಕ್ಕಾಗಿ ಮತ್ತು ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕಾರ್ಯಕ್ಕೆ ರಾಜಮಾರ್ಗ ಹಾಕಿಕೊಟ್ಟರು, ಸ್ವಾತಂತ್ರ್ಯಾನಂತರ ಕವಿ ಸಾಹಿತಿಗಳಾದ ಕೃಷ್ಣಮೂರ್ತಿ ಪುರಾಣಿಕ, ರಾವ ಬಹದ್ದೂರ, ಪಿ.ವಿ.ವಜ್ರಮಟ್ಟಿ, ದು.ನಿಂ.ಬೆಳಗಲಿ, ಸತ್ಯಕಾಮ, ಪಿ.ಬಿ.ದುತ್ತರಗಿ,ಇಬ್ರಾಹಿಂ ಸುತಾರ, ಬಿ.ಆರ್.ಅರಿಷಿನಗೋಡಿ, ಕಂಠಿ ಹನಮಂತರಾಯರು, ಪ್ರಕಾಶ ಕಡಪಟ್ಟಿ, ಜಿ.ಬಿ.ಖಾಡೆ, ಅಬ್ಬಾಸ ಮೇಲಿನಮನಿ, ಅರ್ಜುನ ಕೊರಟಕರ, ಮಹಾದೇವ ಕಣವಿ, ಶಿವಲಿಂಗಮ್ಮ ಕಟ್ಟಿ, ಶಾಂತಾದೇವಿ ಶಾಬಾದಿ, ಸರೋಜಿನಿ ಪಾವಟೆ, ದೊಡ್ಡಣ್ಣ ಗದ್ದನಕೇರಿ, ಅಶೋಕ ಸಮಗಂಡಿ, ಸಂಗಮೇಶ ಕೋಟಿ, ಈಶ್ವರ ಮಂಟೂರ, ರೇಖಾ ಕಾಖಂಡಕಿ, ಎಸ್.ಜಿ.ಕೋಟಿ, ಆನಂದ ಝುಂಜರವಾಡ, ಬಾಳಾಸಾಹೇಬ ಲೋಕಾಪುರ, ಶ್ರೀರಾಮ ಇಟ್ಟಣ್ಣವರ, ಸರೋಜಿನಿ ಇಟ್ಟಣ್ಣವರ, ಚಂದ್ರಶೇಖರ ದೇಸಾಯಿ, ಬಿ.ಆರ್.ಪೊಲೀಸಪಾಟೀಲ, ಮಲ್ಲಿಕಾರ್ಜುನ ಹುಲಗಬಾಳಿ, ವಾದಿರಾಜ ದೇಶಪಾಂಡೆ,ಯಶವಂತ ವಾಜಂತ್ರಿ, ಪೂಜ್ಯ ನಿರುಪಾಧೀಶರು,ಪೂಜ್ಯ ತೋಂಟದ ಸಿದ್ಧರಾಮಶ್ರೀಗಳು, ಪೂಜ್ಯ ಜಮಖಂಡಿ ಓಲೇಮಠ ಶ್ರೀಗಳು, ಅನ್ನದಾನಿ ಹಿರೇಮಠ, ಶಿಲಾಕಾಂತ ಪತ್ತಾರ, ಜಯವಂತ ಕಾಡದೇವರ, ಎಂ.ಎಸ್.ಬದಾಮಿ,ಜಿ.ಎಸ್.ವಡಗಾವಿ,ವಿಶ್ವನಾಥ ವಂಶಾಕೃತಮಠ, ಶಂಭು ಬಳಿಗಾರ, ಸಿದ್ದಪ್ಪ ಬಿದರಿ, ಸತ್ಯಾನಂದ ಪಾತ್ರೋಟ, ಸಿದ್ದರಾಮ ಮನಹಳ್ಳಿ, ಚನ್ನಪ್ಪ ಕಟ್ಟಿ, ಕರವೀರಪ್ರಭು ಕ್ಯಾಲಕೊಂಡ, ಪ್ರಕಾಶ ಖಾಡೆ, ವೀರೇಶ ಬಡಿಗೇರ, ವೈ.ಎಂ.ಯಾಕೊಳ್ಳಿ, ಶಿವಾನಂದ ಶೆಲ್ಲಿಕೇರಿ, ಮಲ್ಲಿಕಾರ್ಜುನ ಶೆಲ್ಲಿಕೇರಿ, ಮಹಾಲಿಂಗ ಪೋಳ,ಸದಾನಂದ ಬಿಳ್ಳೂರ,  ಸದಾಶಿವ ಮಾಳಿ, ಸಂಗಮೇಶ ಕಲ್ಯಾಣಿ, ಶಿವಾನಂದ ಕುಬಸದ, ರಾಜಶೇಖರ ಬಸುಪಟ್ಟದ, ಜಗನ್ನಾಥ ದೊಡಮನಿ,ಪ್ರಕಾಶ ನರಗುಂದ, ಸಣ್ಣವೀರಣ್ಣ ದೊಡಮನಿ, ಲಕ್ಷ್ಮಣ ಬದಾಮಿ, ತಿರುಪತಿ ಬಂಗಿ, ಹನಮಂತ ಹಾಲಿಗೇರಿ,ಆನಂದ ಕುಂಚನೂರ, ಉಮೇಶ ತಿಮ್ಮಾಪುರ, ಮೈನುದ್ದೀನ ರೇವಡಿಗಾರ, ಶಂಕರ ಲಮಾಣಿ, ಶಿವಾನಂದ ಪೂಜಾರಿ, ನಾರಾಯಣ ಯಳ್ಳಿಗುತ್ತಿ, ಅಲ್ಲಮಪ್ರಭು ಅಂಬಿ, ಜಲಜಮಿತ್ರ, ರಾಜು ಯಾದವ, ಪುಂಡಲೀಕ ಹಲಕುರ್ಕಿ, ಗುರುರಾಜ ಲೂತಿ, ಸೋಮಲಿಂಗ ಬೇಡರ, ಕಿರಣ ಬಾಳಾಗೋಳ, ಡಿ.ಎಂ.ಸಾವುಕಾರ, ರಾಮ ಮನಗೂಳಿ, ವೆಂಕಟೇಶ ಇನಾಮದಾರ, ಜೆ.ದಾಜೀಬಾ, ಸಿದ್ದು ದಿವಾಣ, ಮಲ್ಲಿಕಾರ್ಜುನ ಹೆಗ್ಗಳಗಿ, ಎಚ್.ಎಸ್.ತೆಗ್ಗಳ್ಳಿ, ಬಿ.ಎನ್.ಮುಂಡರಗಿ, ಶಂಕರ ಬಸುಪಟ್ಟದ, .ರಾ.ಪುರೋಹಿತ, ಮಲ್ಲಿಕಾರ್ಜುನ ಯಾಳವಾರ, ಗುರುನಾಥ ಸುತಾರ, ವೀರಲಿಂಗನಗೌಡ, ಶಾರದಾ ಮುಳ್ಳೂರ, ಲಲಿತಾ ಹೊಸಪ್ಯಾಟಿ, ಶಶಿಕಲಾ ಮೊರಬದ, ಜಯಶ್ರೀ ಭಂಡಾರಿ .ಅಶ್ವಿನಿ ಬಬಲಿ, ನಂದಿನಿ ಬಬಲಿ, ಚಂದ್ರಪ್ರಭಾ ಬಾಗಲಕೋಟ, ಸುಮಂಗಲಾ ಮೇಟಿ, ಆಶಾರಾಣಿ ಚಿನಗುಂಡಿ, ಮುರ್ತುಜಾಬೆಗಂ ಕೊಡಗಲಿ, ವಿಜಯಲಕ್ಷ್ಮಿ ಬದನೂರ, ದಾಕ್ಷಾಯಣಿ ಮಂಡಿ, ಉಮಾ ಅಕ್ಕಿ, ಶಿವಗಂಗಾ ದುದ್ಗಿ, ಗೀತಾ ತಾರಿವಾಳ, ಗೀತಾ ದಾನಶೆಟ್ಟಿ, ಇಂದುಮತಿ ಪುರಾಣಿಕ, ದಾನೇಶ್ವರಿ ಸಾರಂಗಮಠ, ನಿಂಗಮ್ಮ ಬಾವಿಕಟ್ಟಿ, ನಾಗರತ್ನ ಬಾವಿಕಟ್ಟಿ, ಬಸವರಾಜ ಗವಿಮಠ, ವಿಜಯಕುಮಾರ ಕಟಗಿಹಳ್ಳಿಮಠ, ಸಿದ್ದರಾಮ ಬಂಗಾರಿ, ಮಲ್ಲಿಕಾರ್ಜುನ ಅಂಗಡಿ, ನಾಗಾರಾಜ ನಾಡಗೌಡ, ಪ್ರಭು ಮಾಲಗತ್ತಿಮಠ, ಮೃ..ಮೇಗಾಡಿ, ಪ್ರಕಾಶ ಡಂಗಿ, ಮುತ್ತು ಬಳ್ಳಾ, ಅನಿಲ ಗುನ್ನಾಪುರ, ಶಿವಕುಮಾರ ಕರನಂದಿ, ಬಾಪು ಖಾಡೆ, ಸುರೇಶ ರಾಜಮಾನೆ, ಗುರು ಹಿರೇಮಠ, ಎಂ.ಡಿ.ಚಿತ್ತರಗಿ, ರಮೇಶ ಕಮತಗಿ, ಆದಪ್ಪ ಗೊರಚಿಕ್ಕನವರ, ಸಂಗಣ್ಣ ಮುಡಪಲದಿನ್ನಿ, ನೀ.ಶ್ರೀಶೈಲ, ಚೇತನ ನಾಗರಾಳ, ಸದಾಶಿವ ದೊಡಮನಿ. ಎಂ.ಬಿ.ಒಂಟಿ, ಕಲ್ಲೇಶ ಕುಂಬಾರ, ಎಸ್.ಆರ್.ರಾವಳ. ಎಸ್ಕೆ ಕೊನೆಸಾಗರ, ಸಿದ್ದಲಿಂಗಪ್ಪ ಬೀಳಗಿ, ಮಹಾದೇವ ಬಸರಕೋಡ, ಯೋಗೇಶ ಲಮಾಣಿ, ಶ್ರೀಶೈಲ ಗೋಲಗೊಂಡ, ರವಿ ಕಂಗಳ, ಅಶೋಕ ಬಳ್ಳಾ, ಶ್ರೀಹರಿ ಧೂಪದ, ಸಿ.ಎಂ.ಜೋಶಿ, ಶಂಕರಾನಂದ ಹೆಬ್ಬಾಳ,   ಮೊದಲಾದವರು ತಮ್ಮ ಸಾಹಿತ್ಯ ಕೃತಿಗಳ ಮೂಲಕ ಜಿಲ್ಲೆಯ ಸಾಹಿತ್ಯದ ಕಣಜ ತುಂಬಿದ್ದಾರೆ.

    ಒಟ್ಟಾರೆ ಬಾಗಲಕೋಟ ಜಿಲ್ಲೆಯು ಆಧುನಿಕ ಮತ್ತು ತಂತ್ರಜ್ಞಾನದ ಹೊಸ ಅವಕಾಶಗಳಿಗೆ ಕನ್ನಡವನ್ನು ಸಜ್ಜುಗೊಳಿಸುವಲ್ಲಿ ಆಧುನಿಕ ಕಾಲದ ಯುವ ಮನಸ್ಸುಗಳಲ್ಲಿ ಕನ್ನಡವನ್ನು ಅದರ ಸತ್ವ ಮತ್ತು ಸೌಂದರ್ಯದೊಂದಿಗೆÀ ತಾಜಾತನದಿಂದ ಕಾಯ್ದುಕೊಂಡು ಬರುವಲ್ಲಿ ಇನ್ನಷ್ಟು ಶ್ರಮಿಸಬೇಕಾಗಿದೆ.

ಜಾನಪದ ಪರಂಪರೆ

   ಕನ್ನಡ ಜಾನಪದ ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆಯು ಹಲವು ಪ್ರಥಮಗಳಿಗೆ ಕಾರಣವಾಗಿದೆ. ಕನ್ನಡ ಜಾನಪದದ ಮೊದಲ ನೇಗಿಲ ಪೂಜೆ ನೆರವೇರಿಸಿದವರು ಜಿಲ್ಲೆಯವರು ಎಂಬುದು ದಾಖಲಾರ್ಹವಾದುದು. ಕ್ರಿ.. 700 ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದಲ್ಲಿ ಸಿಕ್ಕುವ ತ್ರಿಪದಿ ಕನ್ನಡ ಜಾನಪದದ ತಾಯಿ ಬೇರಾದರೆ, ಇದೇ ಬಾದಾಮಿಯಿಂದಲೇ ಕ್ರಿ.. 1874 ಸುಮಾರಿಗೆ ಕನ್ನಡದಲ್ಲಿ ಮೊದಲ ಜನಪದ ಸಾಹಿತ್ಯ ಸಂಗ್ರಹಣಾ ಕಾರ್ಯ ಆರಂಭವಾಯಿತು. ಜೊತೆಗೆ ಬಾದಾಮಿ ತಾಲೂಕಿನ ಕೆರೂರದ ಡಾ.ಬಿ.ಎಸ್.ಗದ್ದಗಿಮಠರು ಕನ್ನಡ ಜಾನಪದ ಕ್ಷೇತ್ರದಲ್ಲಿ ಮೊದಲ ಪಿಎಚ್.ಡಿ. ಸಂಪಾದಿಸಿದರು. ಹೀಗೆ ಜಾನಪದದ ರೂಪ, ಸಂಗ್ರಹ , ಸಂಪಾದನೆ, ಸಂಶೋಧನೆ ಕಾರ್ಯಗಳೆಲ್ಲ ಬಾಗಲಕೋಟ ಜಿಲ್ಲೆಯಿಂದಲೇ ಮೊದಲಾದದ್ದು ಒಂದು ಐತಿಹಾಸಿಕ ಸತ್ಯವಾÀಗಿದೆ.

     ಹಲಸಂಗಿ ಗೆಳೆಯರು ಮಾಡಿದ ಜನಪದ ಸಾಹಿತ್ಯ ಸಂಗ್ರಹ ಕಾರ್ಯಕ್ಕೆ ಪ್ರೇರಿತರಾಗಿ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಗಣಪತಿ ಬಾಪು ಖಾಡೆಯವರು ಕ್ರಿ.. 1965 ರಲ್ಲಿ ಜಮಖಂಡಿ ಭಾಗದ ಹಳ್ಳಿಗಳಲ್ಲಿ ಹಾಡುವ ಬೀಸುಕಲ್ಲಿನ ಪದಗಳು, ಕೋಲಾಟದ ಪದಗಳು, ಡೊಳ್ಳಿನ ಹಾಗೂ ಹಂತಿ ಪದಗಳನ್ನು ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದ ಜಿ.ಬಿ.ಖಾಡೆಯವರ ಜನಪದ ಹಾಡುಗಳ ಸಂಕಲನಕಾಡು ಹೂಗಳು' ಹೆಸರಿನಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಪ್ರಸಾರಾಂಗದಿಂದ 1973 ರಲ್ಲಿ ಪ್ರಕಟವಾಯಿತು. ಕೃತಿಯಿಂದ ಜಮಖಂಡಿ ಭಾಗದ ಕೃಷ್ಣಾ ತೀರದ ಜನಪದ ಸಾಹಿತ್ಯ ಮೊದಲ ಬಾರಿಗೆ ಸಂಶೋಧಕರಿಗೆ ಲಭ್ಯವಾಗುವಂತಾಯಿತು. ಹಿರಿಯ ಜನಪದ ತಜ್ಞರಾದ ಜಿ.ಬಿ.ಖಾಡೆಯವರು ಸಂಪಾದಿಸಿರುವ 23 ಜನಪದ ಕಥೆಗಳಬೆಳವಲ ಬೆಳಕು ' ಕೃತಿ ಮತ್ತು ಅಪಾರ ಪ್ರಮಾಣದ ಕರಬಲಾ ಪದಗಳಹಳ್ಳಿ ಹಬ್ಬಿಸಿದ ಹೂಬಳ್ಳಿ' ಕೃತಿಗಳನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು 1981 ರಲ್ಲಿ ಪ್ರಕಟಿಸಿದೆ. ಅಲ್ಲದೇ 'ಬದುಕೇ ಜಾನಪದ' ಹೆಸರಿನಲ್ಲಿ ಅವರ ಜನಪದ ಆತ್ಮ ಕಥನವು 2010 ರಲ್ಲಿ ಪ್ರಕಟವಾಗಿದೆ. ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪಡೆಯಿತು

. ಜಮಖಂಡಿ ತಾಲೂಕು ತುಂಗಳದವರಾದ ಡಾ.ಸಂಗಮೇಶ ಬಿರಾದಾರ ಅವರು ಜನಪದ ಸಾಹಿತ್ಯ ಸಂಗ್ರಹದೊಂದಿಗೆ ಸಂಶೋಧನೆಗೆ ಒತ್ತು ಕೊಟ್ಟರು. ಚಾಪ ಹಾಕತೀವ ಡಪ್ಪಿನ ಮ್ಯಾಲ, ತೇರದಾಳದ ಲಾವಣಿಕಾರರು, ಪಾರಿಜಾತ ಪುಷ್ಪಗಳು, ಜಾನಪದ ಅಲೆಗಳು ಡಾ.ಬಿರಾದಾರ ಅವರ ಜನಪದ ಕೃತಿಗಳು. ಡಾ.ಶ್ರೀರಾಮ ಇಟ್ಟಣ್ಣವರ ಅವರು ಬಯಲಾಟಗಳ ರಾಜ ಎಂದೇ ಖ್ಯಾತಿ ಪಡೆದಿರುವಶ್ರೀ ಕೃಷ್ಣ ಪಾರಿಜಾತ' ಕುರಿತು ಪಿಎಚ್.ಡಿ. ಅಧ್ಯಯನ ಕೈಕೊಂಡು ಮೊದಲಬಾರಿಗೆ ಅದರ ಚರಿತ್ರೆ ಮತ್ತು ಇತಿಹಾಸದ ಮೇಲೆ ಬೆಳಕು ಚೆಲ್ಲಿದರು. ಲಾವಣಿ, ಕೌಜಲಗಿ ನಿಂಗಮ್ಮ ಇವರ ಇತರ ಜಾನಪದ ಕೃತಿಗಳು. ಜಿಲ್ಲೆಯ ಡಾ.ಪಿ.ಕೆ.ಖಂಡೋಬಾ ಅವರು ಲಂಬಾಣಿ ಜೀವನ ಸಂಸ್ಕøತಿ ಕುರಿತು ಆಳವಾದ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧ ಪ್ರಕಟಿಸಿದ್ದಾರೆ. ಡಾ.ಮೃತ್ಯುಂಜಯ ಹೊರಕೇರಿ ಅವರಜನಪದ ಬೈಗುಳಗಳು' ಒಂದು ವಿಶಿಷ್ಟ ಜನಪದ ಕೃತಿ .ಎಸ್.ಜಿ.ಕೋಟಿಯವರತೀರದ ದನಿ', ಡಾ.ಸರೋಜಿನಿ ಪಾವಟೆಯವರಚಲವಾದಿ ಗೌರಮ್ಮನ ಕಥೆಗಳು', ಶಿವಯೋಗಿ ಬಿದರಿಯವರಪಲ್ಲಕ್ಕಿ ಮ್ಯಾಲ ಮಗ ಬರಲಿ',ಸಿದ್ದು ದಿವಾಣ ಅವರಹಂತಿ ನೀ ಎಲ್ಲಿ ಕುಂತಿಜಿಲ್ಲೆಯ ಪ್ರಮುಖ ಜನಪದ ಕೃತಿಗಳು.

      ಹೊಸತೆಲೆಮಾರಿನ ಜನಪದ ವಿದ್ವಾಂಸರಲ್ಲಿ ಡಾ.ಪ್ರಕಾಶ ಖಾಡೆ, ಡಾ.ವೀರೇಶ ಬಡಿಗೇರ, ಶಿವಾನಂದ ಶೆಲ್ಲಿಕೇರಿ ಹಾಗೂ ಡಾ.ಅಶೋಕ ನರೋಡೆ ಮುಖ್ಯರು. ಬಾಗಲಕೋಟೆಯಲ್ಲಿ ನೆಲೆಸಿರುವ ಡಾ.ಪ್ರಕಾಶ ಖಾಡೆಯವರು ತಂದೆಯ ಜಾನಪದ ಕಾಯಕವನ್ನು ಮುಂದುವರಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿರುವನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ', ‘ಕೃಷ್ಣಾತೀರದ ಜನಪದ ಒಗಟುಗಳು’, ‘ಜನಪದ ಕೋಗಿಲೆ ಗೌರಮ್ಮ ಚಲವಾದಿ’, ‘ನೆಲಮೂಲ ಸಂಸ್ಕøತಿ’, ‘ಜಾನಪದ ಹೆಬ್ಬಾಗಿಲು’, ‘ಬಾಗಲಕೋಟ ಜಿಲ್ಲೆಯ ಜನಪದ ಹಾಡುಗಳು’, ‘ಜಾನಪದ ಲೋಕಇವರ ಪ್ರಕಟಿತ ಜನಪದ ಕೃತಿಗಳು. ಹಂಪಿ ವಿ.ವಿ. ಪ್ರಾಧ್ಯಾಪಕರಾದ ಡಾ.ವೀರೇಶ ಬಡಿಗೇರ ಬಾಗಲಕೋಟ ತಾಲೂಕಿನ ಬೆಣ್ಣುರ ಗ್ರಾಮದವರು. ಉತ್ತರ ಕರ್ನಾಟಕದ ಜನಪದ ಗೀತ ಮೇಳಗಳು, ರಾಶಿ ಬುತ್ತಿ, ಅಡಿಗಲ್ಲು, ಹಳೆಲಾವಣಿಗಳು, ಗುಳ್ಳವ್ವ ಆಚರಣೆ ಹಾಗೂ ಸಂಸ್ಕøತಿ ಸಂರಚನೆ ಇವರ ಜನಪದ ಕೃತಿಗಳು. ಡಾ.ಅಶೋಕ ನರೋಡೆಯವರಗೋಸಾಯಿಗಳು ಒಂದು ಜನಾಂಗೀಯ ಅಧ್ಯಯನ’, ಉತ್ತರ ಕರ್ನಾಟಕದ ಗೀ ಗೀ ಮೇಳಗಳು. ಜಾನಪದ ಜಗತ್ತಿಗೆ ಅಗಸೀ ಬಾಗಿಲು, ಕೌಜಲಗಿ ನಿಂಗಮ್ಮ ಇವರ ಜನಪದ ಕೃತಿಗಳು. ಶಿವಾನಂದ ಶೆಲ್ಲಿಕೇರಿ ಅವರ ಬಾಗಲಕೋಟ ಜಿಲ್ಲೆಯ ಜನಪದ ಕಲಾವಿದರು, ಬಾಗಲಕೋಟೆ ಜಿಲ್ಲೆಯ ಪಾರಿಜಾತ ಕಂಪನಿಗಳು , ಬೀರಪ್ಪ ಹಳಮನಿ ಅವರ ಡೊಳ್ಳಿನ ಪದಗಳು, ಡಾ.ಬಿ.ಆರ್.ಪೋಲಿಸಪಾಟೀಲ ಅವರ ಲಾವಣಿಗಳು, ಪಿ.ಡಿ.ವಾಲೀಕಾರ ಅವರಮಳೆ ಸಂಪ್ರದಾಯಮೊದಲಾದವು ಬಾಗಲಕೋಟ ಜಿಲ್ಲೆಯ ಜನಪದ ಸಾಹಿತ್ಯದ ಕೃತಿ ರತ್ನಗಳಾಗಿವೆ.

      ಬಾಗಲಕೋಟ ಜಿಲ್ಲೆಯು ಜನಪದ ಕಲೆಗಳ ತವರುಮನೆ ಎನಿಸಿದೆ. ಇಲ್ಲಿ ಪ್ರತಿ ಊರಿಗೆ ಒಂದು ಭಜನಾ ಮೇಳ, ಡೊಳ್ಳಿನ ಮೇಳ,ಕರಡಿ ಮಜಲು ಕಾಣಸಿಗುತ್ತವೆ. ಸೋಬಾನೆ ಪದಗಳನ್ನು, ಬೀಸುವ ಪದಗಳನ್ನು ಹಾಡುವ ತಾಯಂದಿರು ಪ್ರತಿ ಹಳ್ಳಿಗಳಲ್ಲಿದ್ದಾರೆ. ಜಿಲ್ಲೆಯ ಶ್ರೀಮಂತ ಜನಪದ ಕಲೆ ಶ್ರೀ ಕೃಷ್ಣಪಾರಿಜಾತ. ಪಾರಿಜಾತದಲ್ಲಿ ಕೌಜಲಗಿ ನಿಂಗಮ್ಮ, ಕೃಷ್ಣಾಜಿ ದೇಶಪಾಂಡೆ, ಅಪ್ಪಾಲಾಲ ನಧಾಪ, ಬರಗಿ ರಾಚಯ್ಯ, ಟಕ್ಕಳಕಿ ವಿಠ್ಠಲರಾವ, ಸೂಳಿಕೇರಿ ಯಮೂನಾಬಾಯಿ, ಯಲ್ಲವ್ವ ರೊಡ್ಡಪ್ಪನವರ, ಕಾಶಿಬಾಯಿ ದಾದನಟ್ಟಿ, ಮೊದಲಾದವರು ಖ್ಯಾತನಾಮರು. ಗೊಂದಲಿಗರ ಕಲೆಯಲ್ಲಿ ಬಾಗಲಕೋಟೆಯ ಸುಗತೇಕರ ಕುಟುಂಬದವರು ಜನಪ್ರಿಯರು.ಮಹಾಲಿಂಗಪುರ ಕರಡಿ ಮಜಲು, ಹುನಗುಂದ ತಾಲೂಕಿನ ಕೋಡಿಹಾಳ, ಮುಧೋಳ ತಾಲೂಕಿನ ಲೋಕಾಪುರಗಳಲ್ಲಿ ಬುಡಬುಡಕಿ ಕಲೆಯ ಕಲೆಗಾರಿದ್ದಾರೆ. ಬಾದಾಮಿ ತಾಲೂಕಿನ ಕರಡಿಗುಡ್ಡದಲ್ಲಿ ಕಿಳ್ಳೆ ಕ್ಯಾತ ಕಲಾವಿದರು ಉಳಿದುಕೊಂಡಿದ್ದಾರೆ. ದುರಗ ಮುರಗಿ ಅಲೆಮಾರಿ ಜನಾಂಗದವರು ಜಿಲ್ಲೆಯಲ್ಲಿ ಕಾಣ ಸಿಗುತ್ತಾರೆ. ಬಾದಾಮಿ ತಾಲೂಕಿನ ಕುಟಕನಕೇರಿ, ಕೆಂದೂರಗಳಲ್ಲಿ ಮೋಡಿ ಆಟದ ಮನೆತನಗಳು ಮೋಡಿ ಆಟದ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಪ್ರಸಿದ್ದ ಬಾಗಲಕೋಟೆಯ ಹೋಳಿ ಆಚರಣೆಯಲ್ಲಿ ಹಲಗೆ ನುಡಿಸುವ ತಂಡಗಳಿವೆ.

ಸಂಶೋಧನೆ

    ಬಾಗಲಕೋಟ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಂಸ್ಕøತಿಗೆ ಸಂಬಂಧಿಸಿದಂತೆ ಸಂಶೋಧನಾ ಕೆಲಸವು ಕಳೆದ ಶತಮಾನದ ಮಧ್ಯಭಾಗದಲ್ಲಿ ಆರಂಭವಾದವು. ಜಿಲ್ಲೆಯ ಸಂಶೋಧನಾ ಕ್ಷೇತ್ರ ವೈವಿಧ್ಯಮಯವಾಗಿದೆ. ಜಾನಪದ, ಶಾಸನ, ವಚನ, ಹರಿದಾಸ ಸಾಹಿತ್ಯ, ಹಸ್ತಪ್ರತಿ ಶಾಸ್ತ್ರ, ವ್ಯಾಕರಣ, ಛಂದಸ್ಸು, ಸೃಜನ, ಸೃಜನೇತರ ಸಾಹಿತ್ಯ, ಜೀವನ ಚರಿತ್ರೆ, ರಂಗಭೂಮಿ, ಚಿತ್ರಕಲೆ, ಗ್ರಾಮನಾಮ ವಿಜ್ಞಾನ ಮೊದಲಾದ ಪ್ರಕಾರಗಳಲ್ಲಿ ಸಂಶೋಧನಾ ಕಾರ್ಯ ಜರುಗಿವೆ.ಬಾಗಲಕೋಟ ಜಿಲ್ಲೆಯು ಕರ್ನಾಟಕದ ಸಾಹಿತ್ಯ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ತುಂಬಾ ಎತ್ತರದ ಸ್ಥಾನದಲ್ಲಿದೆ. ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ನಡೆದ ಕೆಲಸ ತುಂಬಾ ಗಮನಾರ್ಹವಾದುದು. ಜನಪದ ಮತ್ತು ಶಾಸನ ಸಾಹಿತ್ಯದಿಂದ ಹಿಡಿದು ಇಂದಿನ ಆಧುನಿಕ ಸಾಹಿತ್ಯದವರೆಗೆ ಸಂಶೋಧನೆಯಲ್ಲಿ ಜಿಲ್ಲೆಯ ನಡೆ ದಾಖಲಾರ್ಹವಾದುದು.

                ಬಾಗಲಕೋಟ ಜಿಲ್ಲೆಯು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಕನ್ನಡದ ಹರಿದಾಸ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಮೇಲೆ ಮೊದಲ ಪಿ.ಎಚ್.ಡಿ. ಪ್ರಬಂಧಗಳು ಜಿಲ್ಲೆಯಿಂದ ಹೊರಬಂದಿರುವುದು ಒಂದು ದಾಖಲೆಯೇ ಸರಿ. ಬಹುಮುಖಿಯಾಗಿ ವಿದ್ವತ್ ವಲಯವನ್ನು ಕಟ್ಟಿದ ನಮ್ಮ ಸಂಶೋಧಕರ ಶ್ರಮ ಮತ್ತು ಕಾಯಕ ಶ್ರದ್ಧೆಯನ್ನು ಪ್ರಬಂಧದಲ್ಲಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.ಡಾ. ಅನಂತರಾಯ ಟಿ. ಪಾಟೀಲ ಅವರು ಬಾಗಲಕೋಟ ಜಿಲ್ಲೆಯಲ್ಲಿ ಪಿಎಚ್.ಡಿ. ಪದವಿ ಪಡೆದ ಮೊಟ್ಟ ಮೊದಲ ಸಂಶೋಧನ ಪ್ರಬಂಧಕಾರರು.  ಡಾ. . ಟಿ. ಪಾಟೀಲ ಅವರುಶ್ರೀ ಪ್ರಸನ್ನವೆಂಕಟದಾಸರು ಮತ್ತು ಅವರ ಕೃತಿಗಳುಕುರಿತು ಸಂಶೋಧನೆ ಕೈಕೊಂಡರು. ಮುಂಬಯಿ ವಿಶ್ವ ವಿದ್ಯಾಲಯದಿಂದ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಆರ್. ಎಸ್. ಪಂಚಮುಖಿ ಅವರ ಮಾರ್ಗದರ್ಶನದಲ್ಲಿ 11-03-1947 ರಲ್ಲಿ ಸಂಶೋಧನಾ ಕಾರ್ಯ ಆರಂಭಿಸಿದರು. ಕನ್ನಡ ಹರಿದಾಸ ಸಾಹಿತ್ಯದಲ್ಲಿ ಇದು ಮೊದಲ ಪಿಎಚ್.ಡಿ. ಪ್ರಬಂಧವಾಗಿ 1956 ರಲ್ಲಿ ಮಿಂಚಿನಬಳ್ಳಿ ಪ್ರಕಾಶನದಿಂದ ಪ್ರಕಟವಾಯಿತು.

                ಪ್ರಸ್ತುತ ಪ್ರಬಂಧದಲ್ಲಿ ವೈಷ್ಣವ ಭಕ್ತಿಯ ಬೆಳವಣಿಗೆ, ಉತ್ತರ ಭಾರತದಲ್ಲಿ ಭಕ್ತಿ ಪಂಥ, ಬಂಗಾಲ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಭಕ್ತಿ ಪಂಥದ ಜೊತೆಗೆ ಪ್ರಸನ್ನ ವೆಂಕಟದಾಸರ ಕಾಲ ನಿರ್ಣಯ, ಜೀವನ ಚರಿತ್ರೆ, ಕೃತಿ ವಿಮರ್ಶೆ, ಕಾಲದ ರಾಜಕಿಯ, ಸಾಮಾಜಿಕ ಜೀವನದೊಂದಿಗೆ ಪ್ರಸನ್ನ ವೆಂಕಟದಾಸರ ಕೀರ್ತನೆಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಭಾವನಾ ಪ್ರಧಾನವಾದ ಅಥವಾ ಪೂರ್ವಗ್ರಹ ಪ್ರತಿಕ್ಷಿಪ್ತವಾದ ಗ್ರಂಥಗಳು ಬರುವ ಹೊತ್ತಿನಲ್ಲಿ ಕಾಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಇತಿಹಾಸವನ್ನು ಕಟ್ಟಿಕೊಟ್ಟ ಪ್ರಬಂಧವು ತುಂಬಾ ಖ್ಯಾತಿಯನ್ನು ತಂದುಕೊಟ್ಟಿತು.

                ಕರ್ನಾಟಕ ವಿಶ್ವವಿದ್ಯಾಲಯದಿಂದ 1955 ರಲ್ಲಿ ಪಿಎಚ್.ಡಿ. ಪದವಿಗಾಗಿ ಮಾನ್ಯ ಮಾಡಿದ ಡಾ. ಬಿ.ಎಸ್.ಗದ್ದಗಿಮಠ ಅವರ ಕನ್ನಡ ಜನಪದ ಗೀತೆಗಳು ಪ್ರಬಂಧವು ಕನ್ನಡ ಜಾನಪದ ಲೋಕದ ಮೊಟ್ಟ ಮೊದಲ ಸಂಶೋಧನಾ ಪ್ರಬಂಧವಾಗಿದೆ. ಉತ್ತರ ಕರ್ನಾಟಕದ ಬಹುಭಾಗವನ್ನೆಲ್ಲ ಸುತ್ತಿ, ಜನಸಾಮಾನ್ಯರ ಸಂಪ್ರದಾಯ, ಸಂಸ್ಕøತಿಗಳಲ್ಲಿ ಒಂದಾಗಿ, ಹಳ್ಳಿ ಹಳ್ಳಿಗಳಲ್ಲಿ ಹೇಳ ಹೆಸರಿಲ್ಲದೆ ಅಡಗಿ ಹೋಗುತ್ತಿದ್ದ ಜಾನಪದ ಗೀತ ರತ್ನಗಳನ್ನು ಸ್ವತಃ ಸಂಗ್ರಹಿಸಿ, ಸಂಪಾದಿಸಿ, ಸಂಶೋಧನೆ ಕೈಕೊಂಡ ಡಾ. ಬಿ. ಎಸ್. ಗದ್ದಗಿಮಠರು ಕನ್ನಡ ಜಾನಪದ ಕ್ಷೇತ್ರದ ಜಿಲ್ಲೆಯ ಮೇರು ನಿಧಿ. ಜನಪದ ಗೀತ ಸಾಹಿತ್ಯದ ಪ್ರಕಾರಗಳಾದ ಸ್ತುತಿ ಪದಗಳು, ಸುಗ್ಗಿ ಹಾಡುಗಳು, ಹಂತಿ ಹಾಡುಗಳು, ಮಕ್ಕಳ ಹಾಡುಗಳ ವಿಶ್ಲೇಷಣೆಯೊಂದಿಗೆ ಹಳ್ಳಿಗರ ಹಬ್ಬಗಳ ಸಾಂಸ್ಕøತಿಕ, ಧಾರ್ಮಿಕ ಆಚರಣೆಗಳ ಒಟ್ಟು ನೋಟವನ್ನು ಹಳ್ಳಿಗರ ಹಾಡಿನ ಮೂಲಕ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಅನುಬಂಧದಲ್ಲಿ ಡಾ. ಗದ್ದಗಿಮಠರು ಸಂಗ್ರಹಿಸಿದ ಹಂತಿಯ  ಹಾಡುಗಳಲ್ಲಿ ಹನ್ನೇರಡು ಶರಣರ ಜೀವನ ಚಿತ್ರಣವಿದೆ. ಕರ್ನಾಟಕ ವಿಶ್ವ ವಿದ್ಯಾಲಯ 1963 ರಲ್ಲಿ ಪ್ರಬಂಧವನ್ನು ಪ್ರಕಟಿಸಿದೆ.

                ಮೇಲೆ ದಾಖಲಿಸಿದ ಎರಡೂ ಪ್ರಬಂಧಗಳು ಕನ್ನಡ ದಾಸ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಮೊದಲ ಸಂಶೋಧನಾ ಪ್ರಬಂಧಗಳಾಗಿವೆ. ಬಾಗಲಕೋಟ ಜಿಲ್ಲೆಯ ಸಂಶೋಧನಾ ಕ್ಷೇತ್ರ ತುಂಬಾ ವೈವಿದ್ಯತೆಯಿಂದ ಕೂಡಿದೆ. ಸಾಹಿತ್ಯ ಮತ್ತು ಸಾಂಸ್ಕøತಿಕವಾಗಿ ಹಲವು ನೆಲೆಗಳ ಅಧ್ಯಯನ ಇಲ್ಲಿ ನಡೆದಿದೆ. ಪ್ರಾಚೀನ ಕವಿ ಕೃತಿಗಳ ಕುರಿತು, ವಚನಕಾರರು ಕುರಿತು, ಶಾಸನ, ಜಾನಪದ, ರಂಗಭೂಮಿ, ವ್ಯಾಕರಣ, ಛಂದಸ್ಸು, ಆಧುನಿಕ ಸಾಹಿತ್ಯ ಕುರಿತು ಹಲವು ನೆಲೆಗಳಲ್ಲಿ ಜಿಲ್ಲೆಯ ಸಂಶೋಧನೆಗಳು ನಡೆದಿವೆ.

                ವಿದ್ವಾಂಸರಾದ ಡಾ. ಎಸ್. ಎಸ್. ಕೋತಿನ ಅವರ ಆಂಡಯ್ಯ ಕವಿ ಮತ್ತು ಕೃತಿಗಳ ಅಧ್ಯಯನ, ಡಾ. ಅನ್ನಪೂರ್ಣ ಎಂ. ಜಾಲವಾದಿ ಅವರಶಂಕರ ದಾಸಿಮಯ್ಯ ಪುರಾಣ ಒಂದು ಅಧ್ಯಯನ’, ಡಾ. ಶಶಿಕಲಾ ಮರಿಬಾಶೆಟ್ಟಿ ಅವರದ್ಯಾಂಪುರ ಚೆನ್ನಕವಿಗಳು’, ಡಾ. ಎಸ್. ಎಸ್. ಬಸುಪಟ್ಟದ ಅವರನಿಜಗುಣ ಶಿವಯೋಗಿ ಹಾಗೂ ಅವರ ಕೃತಿಗಳು’, ಡಾ. ಕೆ.ಎಸ್.ಮಠ ಅವರಚನ್ನ ಬಸವಣ್ಣನವರ ವಚನಗಳು ಒಂದು ಅಧ್ಯಯನಡಾ. ಪಿ.ಎಂ. ಹುಗ್ಗಿ ಅವರಷಡಕ್ಷರ ದೇವ ಒಂದು ಅಧ್ಯಯನಕೃತಿಗಳು ಕನ್ನಡದ ಪ್ರಾಚೀನ ಕವಿ ಕೃತಿಗಳ ಕುರಿತು ಕೈಕೊಂಡ ಸಂಶೋಧನಾ ಪ್ರಬಂಧನಗಳಾಗಿವೆ.

                ಡಾ. ಶ್ರೀರಾಮ ಇಟ್ಟಣ್ಣವರ ಅವರಶ್ರೀಕೃಷ್ಣ ಪಾರಿಜಾತ ಒಂದು ಅಧ್ಯಯನಸಂಶೋಧನಾ ಪ್ರಬಂಧದಲ್ಲಿ ಪಾರಿಜಾತದ ಪರಂಪರೆ ಇತಿಹಾಸ ಮತ್ತು ಕಲಾತಂಡಗಳ ಒಟ್ಟು ಚರಿತ್ರೆಯನ್ನು ತುಂಬಾ ಅಧ್ಯಯನಪೂರ್ಣವಾಗಿ ರೂಪಿಸಲಾಗಿದೆ.    ಡಾ. ವಿರೇಶ ಬಡಿಗೇರ ಅವರಉತ್ತರ ಕರ್ನಾಟಕದ ಐದು ಗೀತಮೇಳಗಳು ಒಂದು ಅಧ್ಯಯನವು ಪ್ರದರ್ಶನ ಸಿದ್ದಾಂತದ ಹಿನ್ನೆಲೆಯಲ್ಲಿ ಕೈಕೊಂಡ ಆಳವಾದ ಅಖಂಡ ಅಧ್ಯಯನವಾಗಿದೆ. ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಮಗ್ಗಲುಗಳಲ್ಲಿ ಜಿಲ್ಲೆಯಿಂದ ಸಂಶೋಧನೆ ಜರುಗಿದೆ. ಡಾ. ಮಹಾದೇವ ಕಣವಿ ಅವರಕನ್ನಡದ ಪ್ರಾತಿನಿಧಿಕ ಪ್ರಾದೇಶಿಕ ಕಾದಂಬರಿಗಳುಡಾ. ರೇಖಾ ಜೋಗುಳ ಅವರಡಾ. ಯು.ಆರ್. ಅನಂತಮೂರ್ತಿಯವರ ಕಾದಂಬರಿಗಳು ಒಂದು ಅಧ್ಯಯನಡಾ. ಗಣೇಶ ಅಮೀನಗಡದಕನ್ನಡ ದಲಿತ ಬಂಡಾಯ ಕಾವ್ಯದಲ್ಲಿ ಪ್ರತಿಮಾ ಸಂವಿದಾನಡಾ. ಜೆ.ಪಿ.ದೊಡಮನಿ ಅವರಶರಣರ ಕುರಿತ ಕನ್ನಡ ಕಾದಂಬರಿಗಳುಡಾ. ಮೃತ್ಯುಂಜಯ ಹೊರಕೇರಿ ಅವರಶ್ರೀ ನಲವಡಿ ಶ್ರೀಕಂಠಶಾಸ್ತ್ರಿಗಳ ಬದುಕು ಬರಹ’, ಡಾ. ವಿಜಯಾ ದಡೇದ ಅವರಕನ್ನಡ ಕಾವ್ಯ ಪರಂಪರೆಯಲ್ಲಿ ಮಹಿಳಾ ಸಾಹಿತ್ಯ’, ಡಾ. ಸುಭಾಸ ಪೋರೆ ಅವರಡಾ. ಜಿ.ಎಸ್. ಶಿವರುದ್ರಪ್ಪ ಕಾವ್ಯ ಒಂದು ಅಧ್ಯಯನಡಾ. ಎಂಜಿ.ವಾರಿ ಅವರಸೋದೆ ಅರಸು ಮನೆತನ ಒಂದು ಅಧ್ಯಯನಸಂಶೋಧನ ಪ್ರಬಂಧಗಳು ಗಮನಾರ್ಹವಾಗಿವೆ.

2001 ರಲ್ಲಿ ಪ್ರಕಟವಾದ ಡಾ. ಅಶೋಕ ನರೋಡೆ ಅವರಏಕಲವ್ಯನ ಪಾತ್ರ ಒಂದು ಅಧ್ಯಯನಸಂಶೋಧನಾ ಪ್ರಬಂಧದಲ್ಲಿ ಏಕಲವ್ಯನ ಕಥಾ ಪರಂಪರೆಯನ್ನು ಸಂಸ್ಕø, ಹಳಗನ್ನಡ, ಜೈನ, ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯಗಳಲ್ಲಿಯ ವಿವರಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದ್ದಾರೆ. ಗುಳೇದಗುಡ್ಡದ ಡಾ. ಆರ್. ಎಸ್. ಅಕ್ಕಮಹಾದೇವಿ ಅವರು 2001 ರಲ್ಲಿ ಡಾ. ವೀರೇಶ ಬಡಿಗೇರ ಅವರ ಮಾರ್ಗದರ್ಶನದಲ್ಲಿಅಲಕ್ಷಿತ ವಚನಕಾರ್ತಿಯರ ವಚನಗಳ ಆಶಯಕುರಿತು ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ ಪ್ರಬಂಧ ಪ್ರಕಟವಾಗಿದೆ.ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿರುವ ಡಾ. ಬಿ.ಎಂ.ಪಾಟೀಲ ಅವರವಚನ ಪಿತಾಮಹ ಡಾ. .ಗು.ಹಳಕಟ್ಟಿ ಅವರ ಬದುಕು ಮತ್ತು ಸಾಹಿತ್ಯ ಮಹಾಪ್ರಬಂಧವುವಚನ ಗುಮ್ಮಟಹೆಸರಿನಲ್ಲಿ ಪ್ರಕಟವಾಗಿದೆ. ಡಾ. ಹಳಕಟ್ಟಿಯವರ ಕಾರ್ಯಸಾಧನೆಯನ್ನು ದಾಖಲಿಡುವ ಅಪರೂಪದ ಮಹಾಪ್ರಬಂಧ ಇದಾಗಿದೆ.

      ಕನ್ನಡ ನವೋದಯ ಕಾವ್ಯಕ್ಕೆ ಜಾನಪದವೇ ಮೂಲ ಪ್ರೇರಣೆ ಪ್ರಭಾವ ಎಂಬುದನ್ನು ಸಾಧಿಸಿವುದರೊಂದಿಗೆ ನವೋದಯ ಕಾವ್ಯದ ನಾಲ್ಕನೆಯ ಕೇಂದ್ರವಾಗಿ ಹಲಸಂಗಿಯನ್ನು ಗುರುತಿಸಿ ವಿಸ್ತøತವಾಗಿ ಅಧ್ಯಯನಕ್ಕೆ ಒಳಪಡಿಸಿದ ಡಾ. ಪ್ರಕಾಶ . ಖಾಡೆಯವರನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವಸಂಶೋಧನ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ 2005 ರಲ್ಲಿ ಪಿಎಚ್.ಡಿ. ಪದವಿ ದೊರೆತಿದೆ. 2007 ರಲ್ಲಿ ಮಹಾ ಪ್ರಬಂಧ ಪ್ರಕಟವಾಗಿ 2010 ರಲ್ಲಿ ಪುನಃ ಮುದ್ರಣ ಕಂಡಿದೆ. ಜಾನಪದ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಡಾ. ಬಿ.ಎಂ.ಹೊಸಮನಿ ಅವರವೇಷಗಾರರು ಒಂದು ಅಧ್ಯಯನ’, ಹುನಗುಂದ ಕಾಲೇಜಿನ ಡಾ. ತಿಪ್ಪೇಸ್ವಾಮಿ ಅವರಬಳ್ಳಾರಿ ಜಿಲ್ಲೆಯ ಜನಪದ ಗೀತ ಸಂಪ್ರದಾಯಗಳು’, ಡಾ. ಶಂಕರ ಮಾದರ ಅವರವಸತಿ ಜಾನಪದ’, ಜಮಖಂಡಿ ಕಾಲೇಜಿನ ಡಾ. ಸದಾಶಿವ ಸಜ್ಜನ ಅವರಕ್ರಿಯಾತ್ಮಕ ಜಾನಪದ’, ಮುಧೋಳ ಕಾಲೇಜಿನ ಲಲಿತಾ ಎಂ. ಕಲ್ಯಾಣಶೆಟ್ಟಿ ಅವರಜಿ. ಬಿ. ಖಾಡೆ ಸಂಕಲಿತ ಜನಪದ ಸಾಹಿತ್ಯಸಂಶೋಧನಾ ಪ್ರಬಂಧಗಳು ಗಮನಾರ್ಹವಾಗಿವೆ.

     ಜಮಖಂಡಿ ಓಲೆಮಠದ ಡಾ. ಚನ್ನಬಸವ ಮಹಾಸ್ವಾಮಿಗಳಮೊಗ್ಗೆಯ ಮಾಯಿದೇವ ಒಂದು ಅಧ್ಯಯನ’, ಗುಳೇದಗುಡ್ಡದ ಡಾ. ರಾಜಶೇಖರ ಬಸುಪಟ್ಟದ ಅವರಚಿತ್ತರಗಿ ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಒಂದು ಅಧ್ಯಯನ’, ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅವರಬಸವೋತ್ತರ ಯುಗದ ವಚನ ಸಾಹಿತ್ಯ ಒಂದು ಅಧ್ಯಯನಸಂಶೋಧನಾ ಪ್ರಬಂಧವು ವಚನಕಾರರ ಅಭಿವ್ಯಕ್ತಿ ವಿಧಾನವನ್ನು ಸಂಪ್ರದಾಯ ಮತ್ತು ಅನ್ವಯಿಕ ಹಿನ್ನೆಲೆಯಲ್ಲಿ ವಿಸ್ತøತವಾಗಿ ರೂಪಿಸಲಾಗಿದೆ.ಡಾ. ಬಸವರಾಜ ಹದ್ಲಿ ಅವರಬಾಲಲೀಲಾ ಮಹಾಂತ ಶಿವಯೋಗಿಗಳು ಒಂದು ಅಧ್ಯಯನ’, ಡಾ. ಡಿ.ಎಸ್. ಬಾಗಲಕೋಟ ಅವರಪ್ರಭುಲಿಂಗ ಲೀಲೆ ಒಂದು ಯೋಗಿಕ ಅಧ್ಯಯನ’, ಡಾ. ಬಿ.ಎಸ್. ಬಿರಾದಾರ ಅವರವಚನ ಸಾಹಿತ್ಯ ಪ್ರಕಟಣೆ ಮತ್ತು ಅಧ್ಯಯನ ಪರಂಪರೆ’, ಡಾ. ಜಿ.ಆಯ್. ನಂದಿಕೋಲಮಠ ಅವರಕರಸ್ಥಲ ಪರಂಪರೆ ಒಂದು ಅಧ್ಯಯನ ಹಾಗೂ ಡಾ. ಎಂ.ಎಸ್. ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ.

  ಬಾದಾಮಿ ತಾಲ್ಲೂಕು ನೀರಬೂದಿಹಾಳ ಗ್ರಾಮದವರಾಗಿರುವ ಡಾ. .ಮಾ.ಯಕೊಳ್ಳಿ ಹಾಗೂ ಅವರ ಪತ್ನಿ ಡಾ. ಪ್ರೇಮಾ ಯಾಕೊಳ್ಳಿ ಜಿಲ್ಲೆಯ ಅಪರೂಪದ ಡಾಕ್ಟರೇಟ ಪಡೆದ ದಂಪತಿಗಳಾಗಿದ್ದಾರೆ. ಡಾ. .ಮಾ.ಯಾಕೊಳ್ಳಿಪ್ರಾಚೀನ ಕನ್ನಡ ಸಂಕಲನ ಕಾವ್ಯಗಳುಕುರಿತು ಡಾ. ಪ್ರೇಮಾ ಯಾಕೊಳ್ಳಿಕನ್ನಡದಲ್ಲಿ ಯುದ್ದೋತ್ತರ ಭಾರತ ಕಥೆಕುರಿತು ಜಿಲ್ಲೆಯ ಹಿರಿಯ ಸಂಶೋಧಕರಾದ ಡಾ. ಬಿ.ಆರ್. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಕೊಂಡು ಪದವಿ ಪಡೆದಿದ್ದಾರೆ. ಡಾ. ಸತ್ಯಾನಂದ ಪಾತ್ರೋಟ ಅವರಬರಗೂರು ರಾಮಚಂದ್ರ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂದರ್ಭಕುರಿತ ಸಂಶೋಧನಾ ಪ್ರಬಂಧವುಭೂಮಿತತ್ವದ ಸೂತ್ರಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಡಾ. ಶಂಭು ಬಳಿಗಾರ ಅವರಜೋಳದ ರಾಶಿ ದೊಡ್ಡನಗೌಡರು ಒಂದು ಅಧ್ಯಯನ’, ಡಾ. ಮೈನುದ್ದೀನ ರೇವಡಿಗಾರ ಅವರಎನ್ಕೆ ಬದುಕು ಮತ್ತು ಸಾಹಿತ್ಯ ಒಂದು ಅಧ್ಯಯನ, ಡಾ|| ಸದಾನಂದ ಬಿಳ್ಳೂರ ಅವರಕೆ.ಜಿ.ಕುಂದಣಗಾರ ಒಂದು ಅಧ್ಯಯನ’, ಡಾ. ಸಂಗಮೇಶ ಮಾಟೋಳ್ಳಿ ಅವರದು.ನಿಂ.ಬೆಳಗಲಿ ಅವರ ಬದುಕು ಬರಹ ಒಂದು ಅಧ್ಯಯನ’, ಡಾ. ಮಹಾಂತೇಶ ಹೂಗಾರ ಅವರಶಿವಕವಿ ಸಂಗಮೇಶ ಹೊಸಮನಿ ಒಂದು ಅಧ್ಯಯನ’, ಡಾ. ಎಸ್.ಜಿ.ಸಜ್ಜಲಗುಡ್ಡ ಅವರಮುದೇನೂರ ಸಂಗಣ್ಣವರ ಬದುಕು ಬರಹಡಾ. ಸಣ್ಣಸಕ್ಕರಗೌಡರ ಅವರಡಾ. ಬಿ.ವಿ.ಶಿರೂರ ಅವರ ಬದುಕು-ಬರಹಡಾ. ಮನೋಹರ ಪೂಜಾರ ಅವರಈಶ್ವರ ಸಣಕಲ್ಲರ ಬದುಕು ಬರಹ’, ಡಾ. ಜಿ.ಕೆ. ಹಿರೇಮಠರಮಹಾಜಂಗಮ’, ಸಂಶೋಧನಾ ಪ್ರಬಂಧಗಳು ನಾಡಿನ ಸಾಧಕರ ಬದುಕಿನ ವಿಸ್ತø ಅನಾವರಣ ಮಾಡಿವೆ.

                                ಜಿಲ್ಲೆಯ ಹಿರಿಯ ಸಂಶೋಧಕರಲ್ಲಿ ಡಾ. ಸಂಗಮೇಶ ಬಿರಾದಾರ ಮುಖ್ಯರು. ‘ವೈಯಾಕರಣ ಎರಡನೆಯ ನಾಗವರ್ಮಇವರ ಸಂಶೋಧನಾ ಮಹಾಪ್ರಬಂಧ. ಕನ್ನಡ ವ್ಯಾಕರಣ ಮತ್ತು ಛಂದಸ್ಸು ಪ್ರಕಾರದಲ್ಲಿ ಪ್ರಬಂಧಕ್ಕೆ ಬಹುದೊಡ್ಡದಾದ ಸ್ಥಾನವಿದೆ. ಡಾ. ಬಿ.ಆರ್. ಹಿರೇಮಠ ಡಾ. ಎಂ.ಎಸ್.ಸುಂಕಾಪುರ, ಡಾ. ರಾ.. ಧಾರವಾಡಕರ, ಡಾ. ..ಮಾಳವಾಡ ಜಿಲ್ಲೆಯಿಂದ ಉದಯಿಸಿದ ಕನ್ನಡದ ಬಹುದೊಡ್ಡ ಸಂಶೋಧಕರು.

                ಡಾ. ಬಿ.ಕೆ. ಹಿರೇಮಠ ಅವರ ಹಸ್ತಪ್ರತಿಗಳಲ್ಲಿ ಚಿತ್ರಕಲೆ, ಡಾ. ಯಾದಪ್ಪ ಪರದೇಶಿ ಅವರ ಉತ್ತರ ಕರ್ನಾಟಕದಲ್ಲಿ ಭಿತ್ತಿ ಚಿತ್ರಕಲೆ ಡಾ. ಎಸ್.ಸಿ.ಪಾಟೀಲ ಅವರಕರ್ನಾಟಕ ಜನಪದ ಚಿತ್ರಕಲೆ’, ಡಾ. ಶೀಲಾಕಾಂತ ಪತ್ತಾರ ಅವರಬಾದಾಮಿ ಸಾಂಸ್ಕøತಿಕ ಪರಂಪರೆ’, ಡಾ. ಸಂಗಮೇಶ ಕಲ್ಯಾಣಿ ಅವರಬಾಗಲಕೋಟ ಜಿಲ್ಲೆಯ ದೇಶಗತಿ ಮನೆತನಗಳು, ಡಾ. ಶಶಿಕಲಾ ಮೊರಬದ ಅವರಜನಪ್ರಿಯ ಮಹಿಳಾ ಕಾದಂಬರಿಗಳು’, ಡಾ. ಸರೋಜಿನಿ ಪಾವಟೆ ಅವರಬಾಗಲಕೋಟ ತಾಲೂಕು ಸಾಹಿತ್ಯ, ಸಾಂಸ್ಕøತಿಕ ಅಧ್ಯಯನ, ಡಾ. ಡಿ.ಎಸ್. ದೊಡಮನಿ ಅವರಬಾಗಲಕೋಟ ಜಿಲ್ಲಾ ಸಾಹಿತ್ಯ ದರ್ಶನಡಾ. ಭೀಮನಗೌಡ ಪಾಟೀಲ ಅವರಬಾಗಲಕೋಟ ಜಿಲ್ಲೆಯ ರಂಗಭೂಮಿಡಾ. ಆನಂದ ಪೂಜಾರ ಅವರಕರಾವಳಿ ಕರ್ನಾಟಕದ ಕಾವಿ ಚಿತ್ರಕಲೆ, ಡಾ.ಬಸವರಾಜ ಗವಿಮಠರಬಾಗಲಕೋಟ ಜಿಲ್ಲೆಯ ಚಿತ್ರ ಕಲೆ’,ಡಾ.ನಾಗರಾಜ ನಾಡಗೌಡರಕನ್ನಡ ಟೀಕಿನ ವಚನಗಳು;ಒಂದು ಅಧ್ಯಯನಡಾ.ಪ್ರಕಾಶ ನರಗುಂದ ಅವರಡಾ.ಬಿ.ಕೆ.ಹಿರೇಮಠ ಒಂದು ಅಧ್ಯಯನ , ಡಾ.ಉಮೇಶ ಹಡಗಲಿ ಅವರಕನ್ನಡ ಸಂಸ್ಕøತಿಯಲ್ಲಿ ಗ್ರಂಥ ಸಂರಕ್ಷಣೆಪದ್ದತಿ ಡಾ. ಸುರೇಶ ಇಂಗಳಗಿ ಅವರ ಪತ್ರಿಕೋದ್ಯಮಿಯಾಗಿ ಡಾ. .ಗು. ಹಳ್ಳಿಕಟ್ಟಿ, ಡಾ. ನಂಜುಂಡಸ್ವಾಮಿ ಅವರಮೈಸೂರು ಒಡೆಯರು ಒಂದು ಅಧ್ಯಯನ, ಡಾ. ಡಿ.ಜಿ.ಹಾಜವಗೋಳ ಹಾಗೂ ಡಾ. ಪಿ.ಕೆ. ಖಂಡೋಬಾ ಅವರ ಜನಾಂಗೀಯ ಅಧ್ಯಯನಗಳು, ಡಾ. ಆಶಾರಾಣಿ ಚಿನಗುಂಡಿ ಅವರಪಾರಿಜಾತದ ಕೌಜಲಗಿ ನಿಂಗಮ್ಮಒಂದು ಅಧ್ಯಯನ, ಮೊದಲಾದವು ಜಿಲ್ಲೆಯ ಸಂಶೋಧನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಡಾ. ಎಚ್.ಎಂ.ಕೈಲಾಸಲಿಂಗಂ, ಡಾ. ಜಿ. ವೀರಭದ್ರಗೌಡ, ಡಾ. ಸಂತೋಷಕುಮಾರಿ ಅಮೀನಗಡ, ಡಾ. ಪಿ.ಎಸ್.ಕಂದಗಲ್ಲ, ಡಾ. ಅನಸೂಯಾ ಕಾಂಬಳೆ, ಡಾ. ಅನಿತಾ ಗುಡಿ,  ಡಾ. ಎಂ.ಬಿ.ಒಂಟಿ, ಡಾ.ಗೊಲ್ಗೊಂಡ ಡಾ. ನಿಂಗಯ್ಯಾ ಒಡೆಯರ, ಡಾ. ಸವಿತಾ ಒಡೆಯರ ಡಾ.ಈಶ್ವರ ಮಂಟೂರ, ಡಾ.ಸುಮಂಗಲಾ ಮೇಟಿ,ಡಾ.ವಿಜಯಶ್ರೀ ಇಟ್ಟಣ್ಣವರ, ಡಾ.ರಾಜೇಶ್ವರಿ ಶೀಲವಂತ, ಡಾ.ಚಂದ್ರಶೇಖರ ಕಾಳನ್ನವರ, ಡಾ.ಸಂತೋಷ ಕಾಳನ್ನವರ, ಡಾ.ವಿಕ್ರಮ ಬಸನಗೌಡರ, ಡಾ.ಉಮೇಶ ತಿಮ್ಮಾಪುರ, ಡಾ.ವಿನಯ ಹಿರೇಮಠ, ಡಾ.ಸಿ.ಎಂ.ಜೋಶಿ ಡಾ.ಸಿತಿಮಾ ವಜ್ಜಲ ಮೊದಲಾದವರು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ.

#             

 

ಡಾ.ಪ್ರಕಾಶ .ಖಾಡೆ  ಮನೆ ನಂ. ಎಸ್.135,  ಬಡಾವಣೆ ಸಂಖ್ಯೆ 63, ನವನಗರ,  ಬಾಗಲಕೋಟೆ  587103

ಮೊ. 9845500890


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ