ಬುಧವಾರ, ಮೇ 8, 2013

ಕವಿತೆ :ನಾಗರಾಜ ಹರಪನಹಳ್ಳಿ.


ºÉƸÀ PÀ«vÉ : ದೂರ ದೂರ ಬಂದಿದ್ದೇವೆ.

.






.....ನಾಗರಾಜ ಹರಪನಹಳ್ಳಿ,ಕಾರವಾರ

UÀÄr¸À®ÄPÁt¢gÀ¯ÉAzÀÄ
zÀÆgÀzÀÆgÀ §A¢zÉÝêÉ

PÁ¯ÉƤUÀ¼À£ÀÄß PÀnÖ ªÀĺÀ®ÄUÀ¼À£ÀÄß
gÀAUÀÄUÉƽ¹zÉÝêÉeÉÆvÉUÉ
¨ÉZÀÑ£ÉAiÀÄ ºÁ¹UÉ ºÉÆA¢¹zÉÝêÉ
¤lÄÖ¹gÀÄ ºÉÆgÀUÉ PÉý¸À¢gÀ¯ÉAzÀÄ
ºÀ¹zÀªÀgÀ PÀ£À¸ÀÄ PÀ¢ÝzÉÝêÉ
PÁgÀt
ºÉƸÀ PÀ£À¸ÀÄ ©Ã¼ÀÄwÛ®è
ºÀ¼É PÀ¸À£ÀÄ ¸ÀPÁgÀUÉÆAr®è
ºÀ¹zÀªÀgÀÄ PÀ£Àß ºÁPÀ¢gÀ¯ÉAzÀÄ
M¼ÀV£À £ÀUÀßDVßPÁt¢gÀ¯ÉAzÀÄ
JvÀÛgÉvÀÛgÀzÀPÀA¥ËAqÀÄ ºÁQzÉÝêÉ

ºÀ¹zÀ ºÉÆmÉÖ ºÀgÀPÀÄ CAV
PÁt¨ÁgÀzÉAzÀÄ §ºÀÄzÀÆgÀ
¸ÀèªÀÄÄä  ¤«Äð¹zÉÝêÉ
ºÀ¹zÀªÀgÀ DPÉÆæñÀPÀmÉÖAiÉÆqÉAiÀÄ ¨ÁgÀzÉAzÀÄ
zÉêÀgÀUÀÄrAiÀÄUÀAmÉ ªÉƼÀV¹zÉÝêÉ
ªÀĹâ ZÀZÀðUÀ¼À°è ¤vÀå ¥Áæyð¸ÀÄwÛzÉÝêÉ
ºÀ¹zÀªÀjUÉ C£ÀßPÉÆqÀÄJAzÀ®è
£ÀªÀÄä ¸ÀA¥ÀvÀÄÛEªÀÄär¸À¯ÉAzÀÄ

ªÀÄ£ÀĵÀågÀ£ÉßÃPÀ¢ÝzÉÝêÉ
ªÀÄ£ÀĵÀåvÀéPÁt¢gÀ¯ÉAzÀÄ
eÁw ªÀUÀðUÀ¼À ¨Éð ºÉuÉ¢zÉÝêÉ
eÉÆvÉUÉ MA¢µÀÄÖ ¨ÉuÉÚAiÀÄ£ÀÄß
«zsÁ£À¸ËzsÀzÀvÀÄ¢UÉ ¸ÀªÀjzÉÝêÉ
PÁgÀt
PɼÀVgÀĪÀªÀgÀÄ ¨ÉuÉÚUÁVvÀªÀQ¸ÀÄvÀÛ°gÀ¯ÉAzÀÄ
ªÉÄïÉüÀ¯ÁUÀzÀªÀgÀÄ PÀĽvÀÄPÉƼÀî¯ÉAzÀÄ
NqÀ¯ÁUÀzÀªÀgÀÄ £ÀqÉzÁqÀ¯ÉAzÀÄ
.........
 * £ÁUÀgÁeï  ºÀgÀ¥À£ÀºÀ½î .PÁgÀªÁgÀ

ಹನಿಗವಿತೆ :


  ಕಂಡೆಯಾ ಇದು ಇಂಡಿಯಾ...

 
  ಪಾಲಿಸುವವರಿಗೆ 
  ಏನೆಲ್ಲ ಕಾನೂನು..
  ಧಿಕ್ಕರಿಸುವವಗೆ
  ಆಗದು
  ಏನೇನೂ !



          ಬಿ.ಎ.ಹುಣಸೀಕಟ್ಟಿ

ಮಕ್ಕಳ ಸಾಹಿತ್ಯ ಮರು ಚಿಂತನೆ ರಾಜ್ಯ ಮಟ್ಟದ ಮಟ್ಟದ ಚಿಂತನಾ ಸಮಾವೇಶ ಸಮಾವೇಶ ಮೇ.16,ಧಾರವಾಡ



 "ಚಿಲಿಪಿಲಿ-ಗುಬ್ಬಚ್ಚಿಗೂಡು ಬಳಗ, ಧಾರವಾಡ
ಸಾಹಿತ್ಯಾಸಕ್ತರಲ್ಲಿ ಒಂದು ಮನವಿ:
ಭಾರತದಲ್ಲಿ ಅಧುನಿಕ ಶಿಕ್ಷಣವು ವಸಾಹತುಶಾಹಿ ಹಾಗೂ ಬಂಡವಾಳಶಾಹಿ ವ್ಯವಸ್ಥೆಗಳ ನಿರ್ವಹಣೆಗೆ ದೇಶೀ ಮಾನವ ಸಂಪನ್ಮೂಲವನ್ನು ತನ್ನ ಅಗತ್ಯಕ್ಕೆ ತಕ್ಕ ಹಾಗೆ ಬಳಸಿಕೊಳ್ಳುವ ಉದ್ದೇಶದಿಂದ ಆರಂಭವಾಯಿತು. ಹೀಗಾಗಿ ವಸಾಹತುಶಾಹಿ ಹಾಗೂ ಬಂಡವಾಳಶಾಹಿ ವ್ಯವಸ್ಥೆಗಳು ಹುಟ್ಟುಹಾಕಿದ ಹೊಸ ನೌಕರಶಾಹಿಯಲ್ಲಿ ಹಾಗೂ ಇತರ ವಲಯಗಳಲ್ಲಿ ಅವಕಾಶಗಳನ್ನು ಗಿಟ್ಟಿಸುವುದೇ ಶಿಕ್ಷಣದ ಪ್ರಾಥಮಿಕ ಉದ್ದೇಶವಾಯಿತು. ಅದಕ್ಕಾಗಿ ಸ್ಪರ್ಧಾತ್ಮಕತೆ ಸಹಜವಾಗಿ ಬೆಳೆದು ಬಂತು. ಇದು ಮಕ್ಕಳ ಸೃಜನಶೀಲತೆಯನ್ನು ನಿರಾಕರಿಸುವ ಯಾಂತ್ರಿಕತೆಗೆ ಹಾಗೂ ಬದುಕು, ಶಿಕ್ಷಣ ಹಾಗೂ ಸೃಜನಶೀಲತೆಗಳ ನಡುವಿನ ಬಿರುಕಿಗೆ ಕಾರಣವಾಯಿತು.
ವಸಾಹತುಶಾಹಿಯಿಂದ ಪ್ರಜಾಸತ್ತೆಗೆ ಮೈಹೊರಳಿಸಿ ಆರು ದಶಕಗಳು ದಾಟಿದವು. ಈ ಹಾದಿಯಲ್ಲಿ ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ವಿಜ್ಞಾನ-ತಂತ್ರಜ್ಞಾನದಲ್ಲಿ ಹಲವು ಬದಲಾವಣೆಗಳಾಗಿವೆ. ಗ್ರಾಮೀಣ ಸಾಂಸ್ಕೃತಿಕ ಬದುಕು ನಿರಂತರವಾಗಿ ಸ್ತಿತ್ಯಂತರವಾಗುತ್ತ ಬಂದಿದೆ. ಜಾಗತೀಕರಣದ ನವಬಂಡವಾಳವಾದದ ಆಕ್ರಮಣದ ನಂತರ ಎಲ್ಲವೂ ಹಣ ಮತ್ತು ವ್ಯಾಪಾರದ ವಹಿವಾಟಾಗಿ ಪರಿವರ್ತನೆಯಾಗುತ್ತಿದೆ. ಸ್ವಾವಲಂಭನೆಯ ಸಾಧನವಾಗಬೇಕಿದ್ದ ಶಿಕ್ಷಣ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದೆ ಎಂಬ ವಾದ ಕೇಳಿಬರುತ್ತಿದೆ. ಗೊತ್ತಿಲ್ಲದಂತೆಯೇ ಮಕ್ಕಳ ಬೆಳವಣಿಗೆಯಲ್ಲಿ ಅಂತರಗೋಚರಿಸುತ್ತಿದೆ. ಸೃಜನಶೀಲತೆ ಹಾಗೂ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಬೆಳೆಯಬೇಕಾದ ಮಕ್ಕಳು ಒಂದೆಡೆ ಐಟಿ-ಬಿಟಿ ಲೋಕದ ಸ್ಪರ್ಧೇಗೆ ಸಿದ್ಧವಾಗುವ ಒತ್ತಡದಲ್ಲಿ, ಇನ್ನೊಂದೆಡೆ ಮಕ್ಕಳ ಲೋಕವನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದ ಹಣ ಹಾಗೂ ವ್ಯಾಪಾರ ಕೇಂದ್ರಿತ ವ್ಯವಸ್ಥೆಯ ತಾತ್ಸಾರದಲ್ಲಿ ಬೆಳೆಯುತ್ತಿದ್ದಾರೆ. ಮಕ್ಕಳ ಕನಸಿಗೆ ಬಣ್ಣ ತುಂಬುವ ಬದಲು ನವಬಂಡವಾಳಶಾಹಿ ವ್ಯವಸ್ಥೆಯ ಕನಸಿನ ಗೋಪುರಕ್ಕೆ ಇಟ್ಟಿಗೆಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಅಂಕಗಳೇ ಪ್ರಮುಖವಾಗಿರುವ ಪರೀಕ್ಷಾಧಾರಿತ ಪಾಠ ಪ್ರವಚನಗಳ ಮಿತಿಯಿಂದ ಕೇವಲ ಜ್ಞಾನಾತ್ಮಕ ವಲಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ. ಜೊತೆಗೆ ಅಂಕಗಳನ್ನೂ ನಿರಾಕರಿಸಿ ಮಕ್ಕಳ ಪ್ರತಿಭಾಶಕ್ತಿಯನ್ನೆಲ್ಲ ಮಾಹಿತಿತಂತ್ರಜ್ಞಾನಕ್ಕೆ ಒಗ್ಗಿಸುವ ವ್ಯವಸ್ಥಿತ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದಾಗಿ ಮಗುವಿನ ಸೃಜನಶೀಲ ಮನಸ್ಸು ಮುದುಡುತ್ತಿದೆ. 
ಬಹುತೇಕ ಪಾಲಕರು ಹಾಗೂ ಮಕ್ಕಳಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳವುದೇ ಮಹಾತಪ್ಪು ಅದರಿಂದ ಸಮಕಾಲೀನ ಜಗತ್ತಿನ ಸ್ಪರ್ಧೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬ ಭ್ರಮೆ ಸ್ಥಾಪಿತವಾಗುತ್ತಿದೆ. ಪಠ್ಯವಿಷಯದಿಂದಾಚೆ ಒಂದಿಷ್ಟು ಗಮನ ಹರಿಸದಂತೆ ಟ್ಯೂಶನ್ ಹಾಗೂ ನಾನಾ ತರಬೇತಿಗಳ ಜೈಲಿನಲ್ಲಿ ಬಂಧಿಗಳಾಗುತ್ತಿದ್ದಾರೆ. ಸೃಜನಶೀಲ ಮಕ್ಕಳು ಶಾಲಾ ಅಂಗಳದಲ್ಲಿ ನಡೆಯುವ ಯಾಂತ್ರಿಕವಾದ ಪರೀಕ್ಷಾ ಪಾಠಗಳಿಂದ ದಡ್ಡನೆಂಬ ಹಣೆಪಟ್ಟಿ ಕಟ್ಟಿಕೊಂಡು ಆತ್ಮಸ್ಥೈರ್ಯ ಕಳೆದುಕೊಂಡು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ. ಎಲೆಕ್ಟ್ರಾನಿಕ ಮಾದ್ಯಮದ ಭರಾಟೆಯಲ್ಲಿ ಮಕ್ಕಳಲ್ಲಿ ವಾಚನಾಭಿರುಚಿ ಕ್ಷೀಣಿಸುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಮಕ್ಕಳು ಭಾವನಾತ್ಮಕವಾಗಿ ದುರ್ಬಲರಾಗುತ್ತಿದ್ದಾರೆ.
ಮಕ್ಕಳಲ್ಲಿರುವ ಶೃಜನಶೀಲ ಗುಣವನ್ನು ಬೆಳೆಸಿ ಅವರ ಕ್ರೀಯಾಶೀಲತೆಗೆ ಇಂಬುಗೊಟ್ಟು, ಅವರ ಭಾವನಾಲೋಕ ವಿಸ್ತರಿಸಿಕೊಂಡು ಬೆಳೆಯಲು ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಸರ ತುಂಬಾ ಅಗತ್ಯ. ಇಂಥ ಪರಿಸರ ಮನೆ-ಶಾಲೆ-ಸಮುದಾಯ ಎಲ್ಲೆಂದರಲ್ಲಿ ದೊರೆಯವಂತಾಗಬೇಕು. ಹಣ, ವ್ಯಾಪಾರ, ವ್ಯಕ್ತಿವಾದ, ಮಾರಾಟ, ಕೊಳ್ಳುಬಾಕತನ ಮೊದಲಾದವುಗಳನ್ನೇ ಬದುಕಿನ ಅನಿವಾರ್‍ಯತೆಯನ್ನಾಗಿಸುತ್ತಿರುವ ಜಾಗತೀಕರಣದ ಹೊಸ ವ್ಯವಸ್ಥೆಯಲ್ಲಿ ಮಕ್ಕಳು ಸೃನಶೀಲತೆಯನ್ನು ಕಾಪಾಡಿಕೊಳ್ಳಬೇಕಾದ ದಾರಿಗಳನ್ನು ಶೋಧಿಸಬೇಕಾಗಿದೆ.
ಹೊಸ ಸಮಾಜೋ-ಆರ್ಥಿಕ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯದ ಬಗೆಗಿನ ಧೋರಣೆಗಳು ಬದಲಾಗುತ್ತಿವೆ. ಮಕ್ಕಳು ಓದುವುದೇ ಇಲ್ಲ. ಓದುವ ಹವ್ಯಾಸ ತುಂಬಾ ಕಡಿಮೆಯಾಗುತ್ತಿದೆ ಎನ್ನುತ್ತಲೇ ಮಕ್ಕಳನ್ನು ಓದಿನಿಂದ ದೂರ ಸರಿಸಲಾಗುತ್ತಿದೆ. ಮಕ್ಕಳ ಸಾಹಿತ್ಯ ರಚನೆಯ ಬಗ್ಗೆ ಗಂಭೀರ ಚಿಂತನೆಗಳು ಕಡಿಮೆಯಾಗಿ ಬರೆದದ್ದೆಲ್ಲ ಮಕ್ಕಳ ಸಾಹಿತ್ಯ ಎಂಬ ನಿಲುವಿನಿಂದ ಅಸಂಖ್ಯ ಪುಸ್ತಕಗಳು ಪ್ರಕಟವಾಗುತ್ತಿವೆ. ಬೆರಳೆಣಿಕೆಯ ಕೆಲವರನ್ನು ಹೊರತುಪಡಿಸಿದರೆ ಸಮಕಾಲೀನ ಹಿರಿಯ ಸಾಹಿತಿಗಳು, ಪ್ರಗತಿಪರ ಲೇಖಕರು, ಯುವ ಬರಹಗಾರರು ಮಕ್ಕಳ ಸಾಹಿತ್ಯಸೃಷ್ಟಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಒಂದು ಬಗೆಯ ನಿರ್ಲಕ್ಷ್ಯ, ತಾತ್ಸಾರಗಳು ಕಂಡು ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಕಳೆದ ಒಂದುವರೆ ದಶಕದಿಂದ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ’ಚಿಲಿಪಿಲಿ-ಗುಬ್ಬಚ್ಚಿಗೂಡು ಬಳಗ’ವು ಸಮುದಾಯದ ಸಹಭಾಗಿತ್ವದಲ್ಲಿ ನಾಡಿನ ಸಾಹಿತಿಗಳು, ಚಿಂತಕರ, ವಿವಿಧ ಸಂಸ್ಕೃತಿಕ ಸಂಘಟನೆಗಳ ಕ್ರಿಯಾಶೀಲರನ್ನು ಒಂದೆಡೆ ಸೇರಿಸಿ ಸಮ್ಮೇಳನ-ಸಮಾವೇಶಗಳನ್ನು ಸಂಘಟಿಸಿ ಪೂರಕ ವಾತಾವರಣ ನಿರ್ಮಿಸುವಲ್ಲಿ ಶ್ರಮಿಸುತ್ತಾ ಬಂದಿದೆ. 
ಸಮಕಾಲಿನ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಹಾಗೂ ಕನ್ನಡದಲ್ಲಿ ಸೃಷ್ಟಿಯಾಗಿರುವ ಮಕ್ಕಳ ಸಾಹಿತ್ಯದ ಸ್ವರೂಪವೇನು? ಮಕ್ಕಳ ಸಾಹಿತ್ಯ ಎದುರಿಸುತ್ತಿರುವ ಬಿಕ್ಕಟ್ಟುಗಳಾವವು? ಸಮಕಾಲೀನ ಸಂದರ್ಭವನ್ನು ಅರಗಿಸಿಕೊಂಡು ಸೃನಶೀಲವಾಗಿರಲು ಯಾವ ಬಗೆಯ ಮಕ್ಕಳ ಸಾಹಿತ್ಯದ ಅಗತ್ಯವಿದೆ? ಮುಂತಾದ ಕೆಲವು ಪ್ರಾಥಮಿಕ ಪ್ರಶ್ನೆಗಳೊಂದಿಗೆ ’ಚಿಲಿಪಿಲಿ-ಗುಬ್ಬಚ್ಚಿಗೂಡು ಬಳಗ’ವು "ಮಕ್ಕಳ ಸಾಹಿತ್ಯ ಮರುಚಿಂತನೆ" ಎಂಬ ವಿಷಯ ಕುರಿತು ರಾಜ್ಯಮಟ್ಟದ ಚಿಂತನಾ ಸಮಾವೇಶವನ್ನು ದಿನಾಂಕ : ೧೬-೦೫-೨೦೧೩ರಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡದಲ್ಲಿ ಸಂಘಟಿಸುತ್ತಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಿರಿಯರು, ಹೊಸಬರಹಗಾರರು ಹಾಗೂ ಸಾಮಾಜಿಕ ಚಿಂತಕರು ಒಂದೆಡೆ ಸೇರಿ ಗಂಭೀರ ಚಿಂತನೆ ನಡೆಸಿ ಮಕ್ಕಳ ಸಾಹಿತ್ಯಕ್ಕೆ ಹೊಸತನ ನೀಡಬೇಕೆಂಬುದು ನಮ್ಮ ಆಶಯ.
ತಾವೂ ಬನ್ನಿ ನಮ್ಮೊಂದಿಗೆ ಕೈಜೋಡಿಸಿ,
ಶಂಕರ ಹಲಗತ್ತಿ
ಡಾ, ನಿಂಗು ಸೊಲಗಿ
ಬಸವರಾಜ ಗಾರ್ಗಿ
ಆರ್. ಎಸ್. ಗುರುಮಠ
ಗುರು ತಿಗಡಿ
ಎಲ್.ವಿ. ರಾಮಾಪೂರ

ಮಕ್ಕಳ ಸಾಹಿತ್ಯ : ಮರು ಚಿಂತನ
"ರಾಜ್ಯಮಟ್ಟದ ಚಿಂತನಾ ಸಮಾವೇಶ"
೧೬-೦೫-೨೦೧೩
ಮುಂಜಾನೆ : ೧೦-೩೦
ಸಮಾವೇಶಕ್ಕೆ ಚಾಲನೆ : ಡಾ ಎಚ್.ಬಿ. ವಾಲಿಕಾರ, ಕುಲಪತಿಗಳು, ಕ.ವಿ.ವಿ, ಧಾರವಾಡ
ಆಶಯ ನುಡಿ : ಡಾ. ನಾ ಡಿಸೋಜ, ಸಾಗರ
ಸಂಯೋಜನೆ : ಸಿ.ಯು. ಬೆಳ್ಳಕ್ಕಿ, ನಿಲಯ ನಿರ್ದೇಶಕರು, ಧಾರವಾಡ

ಮಧ್ಯಾಹ್ನ : ೧೨.೩೦
ಮೊದಲ ಗೋಷ್ಠಿ
ಸಮಕಾಲೀನ ಮಕ್ಕಳ ಸಾಹಿತ್ಯ : ಒಂದು ಪಕ್ಷಿ ನೋಟ
ಜಾಗತೀಕ ನೆಲೆಯಲ್ಲಿ - ಎಫ್.ಸಿ ಚೇಗರಡ್ಡಿ, ರೋಣ
ರಾಷ್ಟ್ರೀಯ ನೆಲೆಯಲ್ಲಿ - ರಾಜಶೇಖರ ಕುಕ್ಕುಂದಾ, ಬೆಂಗಳೂರು
ಕನ್ನಡದ ನೆಲೆಯಲ್ಲಿ - ಚಂದ್ರಗೌಡ ಕುಲಕರ್ಣಿ, ತಾಳಿಕೋಟಿ
ಸ್ಪಂದನೆಯ ಮಾತುಗಳು
ಪ.ಗು. ಸಿದ್ದಾಪೂರ, ಬಸವನಬಾಗೇವಾಡಿ
ಚಂದ್ರಕಾಂತ ಕರದಳ್ಳಿ, ಶಹಪೂರ
ಡಾ. ಪ್ರಕಾಶ ಖಾಡೆ, ಬಾಗಲಕೋಟಿ
ತಮ್ಮಣ್ಣ ಬೀಗಾರ, ಸಿದ್ದಾಪೂರ(ಉ.ಕ)
ಸಾಸ್ವಿಯಳ್ಳಿ ಸತೀಶ, ಶಿವಮೊಗ್ಗ
ಚರ್ಚೆ
ಸಂಯೋಜನೆ : ಡಾ. ನಿಂಗು ಸೊಲಗಿ, ಮುಂಡರಗಿ

ಎರಡನೇ ಗೋಷ್ಠಿ
ಮಧ್ಯಾಹ್ನ : ೨.೩೦
ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ : ಬಿರುಕು-ಬಿಕ್ಕಟ್ಟು
ವಿಷಯ ಮಂಡನೆ : ಡಾ. ಆನಂದ ಪಾಟೀಲ, ಮೈಸೂರು
ಸ್ಪಂದನೆಯ ಮಾತುಗಳು :
ಡಾ. ಲೀಲಾ ಸಂಪಿಗೆ, ಬೆಂಗಳೂರು
ಡಾ. ಸಂಜೀವ ಕುಲಕರ್ಣಿ, ಧಾರವಾಡ
ಟಿ.ಎಸ್. ಗೊರವರ, ಹುಬ್ಬಳ್ಳಿ
ರಾಮಚಂದ್ರ ಪಾಟೀಲ, ಧಾರವಾಡ
ಜಗದೀಶ ಕೆಂಗನಾಳ, ಬೆಂಗಳೂರು
ಶಂಕರ ಶಾಸ್ತ್ರಿ, ಬೆಳಗಾವಿ
ಚರ್ಚೆ
ಸಂಯೋಜನೆ : ಡಾ. ಎಂ. ಡಿ ಒಕ್ಕುಂದ, ಧಾರವಾಡ

ಮೂರನೇ ಗೋಷ್ಠಿ
ಇಳಿಹೊತ್ತು : ೩.೪೫
ಮಕ್ಕಳ ಸಾಹಿತ್ಯ : ಹೊಸ ಸಾಧ್ಯತೆಗಳು
ಸಂಕೀರ್ಣ : ಟಿ.ಜಿ ಶ್ರೀನಿಧಿ, ಬೆಂಗಳೂರು
ಕಥೆ : ಬಸು ಬೇವಿನಗಿಡದ, ಧಾರವಾಡ
ಕಾವ್ಯ : ಸಿದ್ಧರಾಜ ಪೂಜಾರ, ಬನಹಟ್ಟಿ
ನಾಟಕ : ಆಯ್.ಕೆ ಬೋಳುವಾರ, ಪುತ್ತೂರ
ಸ್ಪಂದನೆಯ ಮಾತುಗಳು : 
ಡಾ. ಅರ್ಜುನ ಗೊಳಸಂಗಿ, ಹುಲಕೋಟಿ
ಗಿರೀಶ ಜಕಾಪುರೆ, ಮೈಂದರಗಿ(ಮಹಾರಾಷ್ಟ್ರ)
ಕಾಡಶೆಟ್ಟಿಹಳ್ಳಿ ಸತೀಶ, ತುಮಕೂರ
ಶಿವಲಿಂಗಪ್ಪ, ಬಳ್ಳಾರಿ
ಜಂಬುನಾಥ ಕಂಚ್ಯಾಣಿ, ಬಿಜಾಪೂರ
ಮಮತಾ ಬಿ. ಎ. ಅರಸಿಕೇರಿ
ಎ.ಬಿ. ಕೊಪ್ಪದ, ನವಲಗುಂದ
ವಿವೇಕಾನಂದ ಪಾಟೀಲ, ಗದಗ
ಚರ್ಚೆ
ಸಂಯೋಜನೆ : ಬಸವರಾಜ ಗಾರ್ಗಿ, ಬೆಳಗಾವಿ

ಸಮನ್ವಯ : ಶಂಕರ ಹಲಗತ್ತಿ

ಸಂಜೆ : ೬ 
ಹರಿಹರದ ಹರಿ ಇವರಿಂದ ವೈಜ್ಞಾನಿಕ ಅರಿವು ಮೂಡಿಸುವ ಜಾದು ಕಾರ್ಯಕ್ರಮ
ಆರ್. ಕೆ ಛಾಯಾ ಫೌಂಡೇಶನ್, ಇದರಿಂದ ಮಕ್ಕಳ ಛಾಯಾಚಿತ್ರ ಪ್ರದರ್ಶನ

ಚರ್ಚೆಯಲ್ಲಿ ನಮ್ಮೊಂದಿಗೆ
ಹ.ಮ. ಪೂಜಾರ-ಸಿಂಧಗಿ, ಎಂ.ಎಸ್. ಪೂಜಾರ-ಅಣ್ಣಿಗೇರಿ, ಅಮೃತೇಶ ತಂಡರ-ಅಣ್ಣಿಗೇರಿ, ಚಂದ್ರಪ್ಪ ಹೆಬ್ಬಾಳಕರ-ಬೀದರ, ನಿಂಗಣ್ಣ ಕುಂಟಿ-ಧಾರವಾಡ, ಈಶ್ವರ ಕಮ್ಮಾರ-ಧಾರವಾಡ. ಶ್ರೀಶೈಲ ಹುದ್ದಾರ-ಸಿಗ್ಗಾಂವಿ, ಶಂಕರಗೌಡ ಸಾತ್ಮಾರ-ಮುಂಡಗೋಡ, ಸದ್ದಾಮ ಹುಸೇನ-ಅಬ್ಜಲಪುರ, ಗುರುಸಿದ್ದಸ್ವಾಮಿ-ಡಾವಣಗೇರಿ, ಪರಮೇಶ್ವರ ಕುದರಿ-ಚಿತ್ರದುರ್ಗ, ಸುಲೇಮಾನ-ಕೊಡಗು, ಹನುಮಂತ ನಾಯಕ-ಹಾಸನ, ಪರಮೇಶ್ವರಯ್ಯ ಸೊಪ್ಪಿಮಠ-ಹಗರಿಬೊಮ್ಮನಹಳ್ಳಿ, ವಿಜಯ ಕಿರೇಸೂರ-ಗದಗ, ಎಲ್. ರೆಡ್ಡಿನಾಯ್ಕ-ಹಗರಿಬೊಮ್ಮನಹಳ್ಳಿ, ಗೋಪಾಲ ಕೆ. ನಾಯಕ-ಸಿದ್ದಾಪೂರ, ಶರಣು ಹುಲ್ಲೂರ-ಬೆಂಗಳೂರು, ಯ.ರು. ಪಾಟೀಲ-ಬೆಳಗಾವಿ, ಸುನಂದಾ ಬೆನ್ನೂರಮಠ-ಹುಬ್ಬಳ್ಳಿ, ಡಬ್ಲು ಬಸವರಾಜು-ಗಂಗಾವತಿ, ಸತೀಶ ಕುಲಕರ್ಣಿ-ಹಾವೇರಿ, ಡಾ. ಅರುಣ ಜೋಳದ ಕೂಡ್ಲಗಿ-ಬಳ್ಳಾರಿ, ಡಾ. ಪ್ರಭು ಗಂಜಿಹಾಳ-ಹೊಳೆಯಾಲೂರ, ವಾಯ್.ಬಿ. ಕಡಕೋಳ-ಸವದತ್ತಿ, ಲಕ್ಷ್ಮಣ ಚೌರಿ-ರಾಯಭಾಗ, ಚಿದಂಬರ ನಿಂಬರಗಿ-ಶಿರೋಳ, ಎಲ್.ಐ. ಲಕ್ಕಮ್ಮನವರ-ಧಾರವಾಡ, ಗಾಯತ್ರಿ ಮಾಮನಿ-ಗುಲ್ಬರ್ಗಾ, ಚನ್ನಪ್ಪ ಅಂಗಡಿ- ಧಾರವಾಡ. ಡಾ. ಜಿನದತ್ತ ಹಡಗಲಿ. ಎಸ್.ಎಸ್. ಬೀಳಗಿ. ಪಿ. ಎಂ. ಬೇವಿಕೊಪ್ಪಮಠ, ಅನ್ನಪೂರ್ಣ ಕನೋಜ, ಗಿರಿಜಾದೇವಿ ತಾಳಿಕೋಟಿಮಠ, ಮತ್ತು ನೀವು... 
ಸಂಘಟನೆಯಲ್ಲಿ : ಆರ್.ಎಸ್. ಗುರುಮಠ-ನವಲಗುಂದ, ವಿ. ಎನ್. ಕೀರ್ತಿವತಿ, ಎಲ್.ವಿ. ರಾಮಾಪೂರ-ಹುಬ್ಬಳ್ಳಿ, ಗುರು ತಿಗಡಿ-ಧಾರವಾಡ, ಕೆ.ಎಚ್. ನಾಯಕ- ಧಾರವಾಡ, ಜಗುಚಂದ್ರ.ಕೆ-ಧಾರವಾಡ, ಯರಿಸ್ವಾಮಿಜಿ-ಧಾರವಾಡ, ಡಾ.ರಾಮು ಮೂಲಗಿ-ಹುಬ್ಬಳ್ಳಿ, ಶಶಿಧರ ತೋಡಕರ-ಧಾರವಾಡ, ಡಾ. ಎಲ್.ಆರ್. ಅಂಗಡಿ-ಹುಬ್ಬಳ್ಳಿ, ಅವಳೆಕುಮಾರ."